ಕೇಂದ್ರ ಸರ್ಕಾರ 156 ಫಿಕ್ಸೆಡ್ ಡೋಸ್ ಕಾಂಬಿನೇಷನ್ ಔಷಧಿಗಳನ್ನು ನಿಷೇಧಿಸಿದೆ. ಜ್ವರ, ಶೀತ, ಅಲರ್ಜಿಗಳಿಗೆ ಬಳಸುವಂತಹ ಬ್ಯಾಕ್ಟೀರಿಯಾ ವಿರೋಧಿ ಔಷಧಿಗಳು ಇವುಗಳಲ್ಲಿ ಸೇರಿದ್ದು, ಮನುಷ್ಯರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
FDC ಎಂದರೇನು?
ಎಫ್ಡಿಸಿ ಎಂದರೆ ಫಿಕ್ಸೆಡ್ ಡೋಸ್ ಕಾಂಬಿನೇಷನ್ ಎಂದು ಕರೆಯಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ಇವು ಹೊಂದಿರುತ್ತವೆ. ಇದನ್ನು ಕಾಕ್ಟೈಲ್ ಡ್ರಗ್ಸ್ ಎಂದೂ ಕೂಡ ಕರೆಯಲಾಗುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್ 12ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ಕೆಲವು ಫಾರ್ಮಾ ಕಂಪನಿಗಳು ತಯಾರಿಸುವ ನೋವು ನಿವಾರಕ ಔಷಧಿಗಳಲ್ಲಿ ಒಂದಾದ ‘Aceclofenac 50mg + Paracetamol 125mg’ ಮಾತ್ರೆಯನ್ನು ಸರ್ಕಾರ ನಿಷೇಧಿಸಿದೆ.
ಇದಲ್ಲದೆ, ಮೆಫೆನಾಮಿಕ್ ಆಸಿಡ್ + ಪ್ಯಾರೆಸಿಟಮಾಲ್ ಇಂಜೆಕ್ಷನ್, ಸೆಟಿರಿಜಿನ್ ಹೆಚ್ಸಿಎಲ್ + ಪ್ಯಾರೆಸಿಟಮಾಲ್ + ಫೆನೈಲ್ಫ್ರಿನ್ ಎಚ್ಸಿಎಲ್, ಲೆವೊಸೆಟಿರಿಜಿನ್ + ಫೆನೈಲೆಫ್ರಿನ್ ಎಚ್ಸಿಎಲ್ + ಪ್ಯಾರೆಸಿಟಮಾಲ್, ಪ್ಯಾರೆಸಿಟಮಾಲ್ + ಕ್ಲೋರ್ಫೆನಿರಮೈನ್ ಮಲೇಟ್ + ಫೆನೈಲ್ ಪ್ರೊಪನೊಲಮೈನ್ ಮತ್ತು ಕ್ಯಾಮಿಲೋಫಿನ್ ಡೈಹೈಡ್ರೋಕ್ಲೋರೈಡ್ 25 ಮಿಗ್ರಾಂ ಮಾತ್ರೆಗಳನ್ನು ನಿಷೇಧಿಸಿದೆ.
FDC ಔಷಧಿಗಳು ಮಾನವನಿಗೆ ಭಾರೀ ಅಪಾಯವನ್ನು ತಂದೊಡಡ್ಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕೇಂದ್ರವು ಸರಿಯಾಗಿ ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಿವೆ. ಇದರ ಜೊತೆಗೆ ಪ್ಯಾರೆಸಿಟಮಾಲ್, ಟ್ರಮಾಡಾಕ್, ಟೌರಿನ್ ಮತ್ತು ಕೆಫೀನ್ ಜೊತೆಗೂಡಿ ತಯಾರಿಸುವ ಮಾತ್ರೆಗಳನ್ನು ಕೇಂದ್ರ ನಿಷೇಧಿಸಿದೆ.