ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ಆನ್ಲೈನ್ ಪ್ಲಾಟ್ಫಾರ್ಮ್ ನಾಲ್ಕು ದಿನಗಳವರೆಗೆ ಕಾರ್ಯ ನಿರ್ವಹಿಸುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆಗಸ್ಟ್ 29ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 2ರವರೆಗೆ ಪೋರ್ಟಲ್ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.
ಪಾಸ್ಪೋರ್ಟ್ ಸೇವಾ ಪೋರ್ಟಲ್ ತಾಂತ್ರಿಕ ನಿರ್ವಹಣೆ ನಾಲ್ಕು ದಿನಗಳ ಕಾಲ ಮುಚ್ಚಿರುತ್ತದೆ. ಈ ವೇಳೆ ಹೊಸ ನೇಮಕಾತಿ ಮಾಡಲು ಸಾಧ್ಯವಾಗುವುದಿಲ್ಲ. ಆಗಸ್ಟ್ 29ರಂದು ಗುರುವಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಿ ಸೆಪ್ಟೆಂಬರ್ 2 ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸುದಿಲ್ಲ. ನಾಗರಿಕರಿಗಾಗಿ MEA/RPO/BOIಗಳಿಗೆ ಈ ಅವಧಿಯಲ್ಲಿ ಸಿಸ್ಟಮ್ ಲಭ್ಯವಿರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
ಪಾಸ್ಪೋರ್ಟ್ ಆನ್ಲೈನ್ ಪೋರ್ಟಲನ್ನು ಹೊಸ ಪಾಸ್ಪೋರ್ಟ್ ಅಪ್ಲಿಕೇಶನ್ ಹಾಕಲು, ನವೀಕರಣಕ್ಕಾಗಿ ಬಳಸಲಾಗುತ್ತದೆ. ಇದರ ಮೂಲಕ ನಿಗದಿತ ಅಪಾಯಿಂಟ್ಮೆಂಟ್ಗಳದಂದು ಅರ್ಜಿದಾರರು ಕಚೇರಿಯಲ್ಲಿ ಹಾಜರಿರಬೇಕಾಗುತ್ತದೆ. ಪರಿಶೀಲನೆ ವೇಳೆ ಅಗತ್ಯ ದಾಖಲೆಯನ್ನು ಒದಗಿಸಬೇಕಿದೆ ಮತ್ತು ಪೊಲೀಸರ ಪರಿಶೀಲನೆಗೆ ಸಹಕರಿಸಬೇಕಿದೆ. ಪೊಲಿಸರ ಪರಿಶೀಲನೆಯ ಬಳಿಕ ಪಾಸ್ಪೋರ್ಟ್ ಅರ್ಜಿದಾರರ ವಿಳಾಸಕ್ಕೆ ಬಳಸಲಾಗುತ್ತದೆ. 30ರಿಂದ 45 ದಿನಗಳಲ್ಲಿ ಪಾಸ್ಪೋರ್ಟ್ ಸಿಗಲಿದೆ.