ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆಗಿ ಜೂನ್ 20ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ 6 ತಿಂಗಳ ಬಳಿಕ ಮತ್ತೆ ಮನೆಗೆ ಮರಳಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಪವಿತ್ರಾ ಗೌಡ ರಿಲೀಸ್ ಆಗಿದ್ದಾರೆ. ಮಂಗಳವಾರ ಮನೆ ಮಗಳು ಮನೆಗೆ ಬಂದ ಖುಷಿಯಲ್ಲಿ ಪವಿತ್ರಾ ಗೌಡ ತಾಯಿ ಇದ್ದಾರೆ. ಜೈಲಿಂದ ಹೊರಗೆ ಬಂದ ಪವಿತ್ರಾ ಗೌಡ, ಪರಪ್ಪನ ಅಗ್ರಹಾರದ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಿದ್ರು. ಮಗಳಿಗಾಗಿ ಗೇಟ್ನಲ್ಲೇ ಕಾಯ್ತಿದ್ದ ಪವಿತ್ರಾ ತಾಯಿ ಅಲ್ಲೇ ಇದ್ದ ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ರು.
ಕನಕಪುರ ರಸ್ತೆಯ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಪವಿತ್ರಾಗೌಡ ಅವರ ತಾಯಿಯ ಮನೆ ದೇವರು ಆಗಿದೆ. ಹೀಗಾಗಿ ಜೈಲಿನಿಂದ ಪವಿತ್ರಾಗೌಡ ಬಿಡುಗಡೆ ಆದ ಮೇಲೆ ಅವರ ತಾಯಿ ಮೊದಲು ಜೈಲಿನ ಆವರಣದಲ್ಲಿರುವ ಮುನೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇದಾದ ಮೇಲೆ ನೇರ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಾಲಯದ ಮುಂದೆ ಪವಿತ್ರಾಗೌಡ ತೀರ್ಥಸ್ನಾನ ಮಾಡಿದ್ದಾರೆ. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ.
ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪೂಜಾರಿಗಳಿಗೆ ಹೇಳಲಾಗಿದೆ. ಹೀಗಾಗಿ ಪೂಜಾರಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿದ್ದಾರೆ.
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಮಗಳನ್ನು ನೋಡಲು ಪ್ರತಿ ವಾರ ಜೈಲಿಗೆ ಬರ್ತಿದ್ದ ಪವಿತ್ರಾ ಗೌಡ ತಾಯಿ ಇಂದು ತುಂಬಾ ಖುಷಿಯಲ್ಲಿದ್ದಾರೆ. ಮಗಳು ಹೊರಗೆ ಬರ್ತಿದ್ದಂತೆ ಖುಷಿಯಲ್ಲಿ ಮಗಳನ್ನು ತಬ್ಬಿಕೊಂಡಿದ್ದಾರೆ.ಸದ್ಯ ಪವಿತ್ರಾ ಗೌಡ ರಿಲೀಸ್ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಖುಷಿ ದುಪ್ಪಟ್ಟು ಆಗಿದೆ.