ಕಳೆದ ವರ್ಷ ಬೆಂಗಳೂರಲ್ಲಿ ಕಂಬಳ ಅದ್ದೂರಿಯಾಗಿ ನಡೆದಿತ್ತು, ಅಂತೆಯೇ ಈ ವರ್ಷ ಕೂಡ ಅಕ್ಟೋಬರ್ 26 ರಂದು ಆಯೋಜನೆ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಕಂಬಳ ಆಯೋಜನೆ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಆಗಿದೆ. ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಿತು. ಅಕ್ಟೋಬರ್ 26ಕ್ಕೆ ಆಯೋಜಿಸಲಾಗಿದೆ ಎನ್ನುತ್ತಿದ್ದೀರಾ? ಕೊನೆಯ ಕ್ಷಣದಲ್ಲಿ ಏಕೆ ಕೋರ್ಟ್ ಮುಂದೆ ಬಂದಿದ್ದೀರಾ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು.
ಈ ಸಂಬಂಧ ಜುಲೈನಲ್ಲಿ ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಅದು ಇನ್ನೂ ವಿಚಾರಣೆಗೆ ನಿಗದಿ ಮಾಡಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲ ಧ್ಯಾನ್ ಚಿನ್ನಪ್ಪ ತಿಳಿಸಿದರು. ಈಗ ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ದಕ್ಷಣ ಕನ್ನಡ ಜಿಲ್ಲೆಯಿಂದ ಕೋಣಗಳ ತರಲಾಗ್ತಿದೆ. ದೊಡ್ಡ ದೊಡ್ಡ ವಾಹನಗಳಲ್ಲಿ ಬೆಂಗಳೂರಿಗೆ ತರಲಾಗ್ತಿದೆ ಎಂದರು. ವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಮತ್ತೊಂದು ಕಡೆ ಬೆಂಗಳೂರು ಕಂಬಳ ಸಮಿತಿ ಇನ್ನೂ ಯಾವುದೇ ಪೂರ್ವ ತಯಾರಿ ಮಾಡಿಲ್ಲ ಎನ್ನಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನುಮತಿ ಸಿಗಬೇಕಾದರೆ ಮೂರು ತಿಂಗಳ ಪ್ರಕ್ರಿಯೆ ನಡೆಯಬೇಕು.