ದಕ್ಷಿಣ ಆಫ್ರಿಕಾದ ಪೊಟ್ಚೆಪ್ಸ್ಟ್ರೂಮ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್-ಆಫ್ರಿಕನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೀನಿಯರ್ಸ್ ವಿಭಾಗದಲ್ಲಿ 25 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಸೀನಿಯರ್ಸ್ ವಿಭಾಗದಲ್ಲಿ ಭಾಗವಹಿಸಿದ ಅಕ್ಷತಾ ಪೂಜಾರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳದವರು. ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಕ್ಷತಾ ಪೂಜಾರಿ ಹಲವಾರು ಚಿನ್ನದ ಪದಕ ಗೆದ್ದವರು. ಏಷ್ಯಾ ಮತ್ತು ಕಾಮನ್ವೆಲ್ತ್ ಕೂಟ ಹಾಗೂ ವಿಶ್ವಮಟ್ಟದಲ್ಲಿ ಹಲವಾರು ಚಿನ್ನದ ಪದಕ ಗೆದಿದ್ದಾರೆ. ಅಲ್ಲದೇ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.