ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಶವರ್ ಕಾರ್ಯಕ್ರಮದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
![](https://guaranteenews.com/wp-content/uploads/2024/08/WhatsApp-Image-2024-08-23-at-5.29.14-PM.jpeg)
ತುಂಬು ಗರ್ಭಿಣಿ ಆಗಿರುವ ಪ್ರಣಿತಾ ಅವರ ಬೇಬಿ ಶವರ್ ಕಾರ್ಯಕ್ರಮ ಇತ್ತೀಚೆಗಷ್ಟೇ ಐಷಾರಾಮಿ ಹೋಟೆಲ್ನಲ್ಲಿ ಜರುಗಿದೆ. ಈ ವೇಳೆ, ಲೈಟ್ ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಮಗಳು ಆರ್ನಾ ಕೈ ಹಿಡಿದು ಹೋಟಲ್ ಆಗಮಿಸುತ್ತಿರುವ ಫೋಟೋ ಸೇರಿದಂತೆ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಐಷಾರಾಮಿ ಹೋಟೆಲ್ನಲ್ಲಿ ನಡೆದ ನಟಿಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆಪ್ತರಷ್ಟೇ ಆಹ್ವಾನ ನೀಡಲಾಗಿತ್ತು. ಮತ್ತೆ ತಾಯಿಯಾಗುತ್ತಿರುವ ನಟಿಗೆ ಅಭಿಮಾನಿಗಳು ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ.
Continue Reading