ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ರನ್ನು ನೋಡಲು ಪರಪ್ಪನ ಅಗ್ರಹಾರದ ಜೈಲಿಗೆ ನಟಿ ರಚಿತಾ ರಾಮ್ ಭೇಟಿ ಕೊಟ್ಟಿದ್ದಾರೆ.
ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ರಾಮ್ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ್, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ರುದ್ರೇಶ್ ಕೂಡ ನಟನನ್ನು ನೋಡಲು ಜೈಲಿಗೆ ಬಂದಿದ್ದಾರೆ. ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.