ರಾಕಿಂಗ್ ಸ್ಟಾರ್ ಯಶ್ ಅವರು ಹಾಲಿವುಡ್ನ ಸಂದರ್ಶನವೊಂದರಲ್ಲಿ ತಮ್ಮ ಮನದರಸಿಯಾದ ರಾಧಿಕ ಪಂಡಿತ್ ಅವರ ಬಗ್ಗೆ ಮಾತನಾಡುತ್ತಾ ‘ನನ್ನ ಬಾಳ ಸಂಗಾತಿ ರಾಧಿಕಾ ಹಾಗೂ ನಾನು ಇಂಡಸ್ಟ್ರಿಯಲ್ಲಿ ಜೊತೆಯಾಗಿ ಬಂದು ಒಟ್ಟಿಗೆ ಬೆಳೆದವರು. ಆಕೆ ನನ್ನ ಸ್ಟ್ರೆಂಥ್, ಪತ್ನಿಗಿಂತ ಮೊದಲು ಗೆಳತಿ. ಹೀಗಾಗಿ ನನ್ನ ಬಗ್ಗೆ ಅವಳಿಗೆ, ಅವಳ ಬಗ್ಗೆ ನನಗೆ ಎಲ್ಲ ವಿಚಾರ ಗೊತ್ತು. ಇಲ್ಲವಾದರೆ ನನ್ನಂಥಾ ವರ್ಕೋಹಾಲಿಕ್, ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟ. ನಾನೊಂದು ಸಿನಿಮಾ ಒಪ್ಪಿಕೊಂಡರೆ ಆಕೆ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕೇಳಲ್ಲ, ಬದಲಿಗೆ ನೀನು ಖುಷಿಯಾಗಿದ್ದೀಯಾ ಅಂತಷ್ಟೇ ಕೇಳ್ತಾಳೆ. ಅವಳು ಕೇಳೋದು ನನ್ನ ಗಮನ ಮತ್ತು ಸಮಯ. ಅದನ್ನೂ ಅವಳಿಗೆ ನೀಡೋದು ಕಷ್ಟವಾಗುತ್ತಿದೆ’ ಎಂದು ಯಶ್ ಹೇಳಿದ್ದಾರೆ.
ಇದನ್ನು ಓದಿ: ಬರ್ತಿದೆ ಘಜಿನಿ ಸೀಕ್ವೆಲ್.. ಪಾರ್ಟ್-2ನಲ್ಲಿ ಆಮೀರ್ & ಸೂರ್ಯ ಜುಗಲ್ಬಂದಿ