ರಾಯಚೂರು: ರಸ್ತೆ ದಾಟುವಾಗ ಸರ್ಕಾರಿ ಬಸ್ ಹರಿದು ಪಾದಚಾರಿ ವೃದ್ಧೆ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಬಳಿ ನಡೆದಿದೆ.ಮೃತ ವೃದ್ಧೆಯನ್ನು ಜಾಲಹಳ್ಳಿ ಗ್ರಾಮದ ನಿವಾಸಿ ದುರುಗಮ್ಮ (72) ಎಂದು ಗುರುತಿಸಲಾಗಿದೆ.
ಸರ್ಕಾರಿ ಬಸ್ ಯಾದಗಿರಿ ಜಿಲ್ಲೆಯ ಶಹಪುರದಿಂದ ಬಳ್ಳಾರಿಗೆ ಹೊರಟಿತ್ತು. ಇದೇ ಸಮಯದಲ್ಲಿ ತಿಂಥಣಿ ಸೇತುವೆ ಬಳಿ ವೃದ್ಧೆ ರಸ್ತೆ ದಾಟುತ್ತಿದ್ದರು. ಈ ವೇಳೆ ವೃದ್ಧೆಯ ಮೇಲೆ ಬಸ್ ಹರಿದು ಅವಘಡ ಸಂಭವಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.