ಖ್ಯಾತ ತಾರೆ ರಶ್ಮಿಕಾ ಮಂದಣ್ಣ ಇಟಲಿಯಲ್ಲಿ ನಡೆಯುತ್ತಿರುವ ಮಿಲಾನ್ ಫ್ಯಾಷನ್ ವೀಕ್ನ ಡೇ ಶೋನಲ್ಲಿ ಕಪ್ಪು ಬಣ್ಣದ ಫ್ಯಾಷನಬಲ್ ಉಣ್ಣೆಯ ಕಾಲರ್ ಜಾಕೆಟ್ ಮತ್ತು ಹೊಳೆಯುವ ಮಿನಿ ಸ್ಕರ್ಟ್ ನ, ಧರಿಸಿ ಪೋಸ್ ನೀಡಿದ್ದಾರೆ.
ಜಪಾನ್ ಸ್ಪೋರ್ಟ್ಸ್ ಫ್ಯಾಷನ್ ಬ್ರಾಂಡ್ ವಿನ್ಯಾಸಗೊಳಿಸಿರುವ ಬ್ಲ್ಯಾಕ್ ವೇರ್ನಲ್ಲಿ ಬೋಲ್ಡ್ ಆಗಿ ಕಂಗೊಳಿಸಿರುವ ಅವರು ಈ ಉಡುಪಿಗೆ ಮಾಡಿರುವ ಸೋಕಿ ಐ ಮೇಕಪ್ಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ರಶ್ಮಿಕಾ ಹಗಲಿನಲ್ಲಿ ಸ್ಮೋಕಿ ಐ ಮೇಕಪ್ ಮಾಡಿಕೊಂಡಿರುವುದೇಕೆ?’ ಎಂದು ಕೆಲವು ಫ್ಯಾಷನ್ ಪೊಲೀಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು, ‘ಕಪ್ಪು ಬಣ್ಣದ ಉಡುಪಿಗೆ ಸ್ಟೋಕಿ ಐ ಚೆನ್ನಾಗಿ ಕಾಣುತ್ತದೆಯಾದರೂ ಮಿಲಾನ್ನಂಥ ನಗರದ ದೀರ್ಘ ಹಗಲು ವೇಳೆ ಇಂಥ ಮೇಕಪ್ ಅನಗತ್ಯ’ ಎಂದಿದ್ದಾರೆ.