ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ಬಹಳ ಸದ್ದು ಮಾಡಿತ್ತು, ಇದೀಗ ಪುಷ್ಪ 2 ಕೂಡ ತೆರೆಗೆ ಬರುವ ತಯಾರಿಯಲ್ಲಿದೆ. ಇದರ ನಡುವೆಯೇ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುಷ್ಪ 2 ಫೋಟೋಸ್ ಹಂಚಿಕೊಂಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಸೆಟ್ ಹಾಗೂ ಪ್ರಚಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಅವರು ನಿರ್ದೇಶಕ ಸುಕುಮಾರ್ ಅವರ ಜೊತೆಗೆ ಫೋಟೋಗೆ ಪೋಸ್ ಕೊಟ್ಟು , ಪೋಸ್ಟ್ ಮಾಡಿದ್ದಾರೆ.
ಅವರು ಶ್ರೀವಲ್ಲಿ ಲುಕ್ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಶ್ರೀವಲ್ಲಿ ಅವರು ಅವರ ಗ್ಲಾಮರಸ್ ಲುಕ್ನಲ್ಲಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಮತ್ತು ರಶ್ಮಿಕಾ ಅವರ ಲುಕ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಶ್ಮಿಕ ಮತ್ತು ಪುಷ್ಪ ಸಿನಿಮಾ ತಂಡ ಪ್ರಚಾರಕ್ಕಾಗಿ ವಿವಿಧೆಡೆ ತೆರಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಈ ಪುಷ್ಪ 2 ಸಿನಿಮಾ ಇದೇ ಡಿಸೆಂಬರ್ 5 ರಂದು ರಿಲೀಸ್ ಆಗಲಿದೆ. ಪುಷ್ಪ ಸಿನಿಮಾ ನೋಡಿದ ಅಭಿಮಾನಿಗಳು ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನೋಡಲು ಕಾಯುತ್ತಿದ್ದಾರೆ.