2024ರ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಈಗಾಗಲೇ KKR, SRH, RR ಹಾಗೂ RCB ಪ್ಲೇ ಆಫ್ಗೆ ಎಂಟ್ರಿ ನೀಡಿವೆ.
ಕೇವಲ ಒಂದು ವಾರದ ಹಿಂದೆ ಆರ್ಸಿಬಿ, ರಾಜಸ್ಥಾನ್ ಕಥೆ ಬೇರೆ ಇತ್ತು. ಯಾರು ಆರ್ಸಿಬಿ, ರಾಜಸ್ಥಾನ್ ಎಲಿಮಿನೇಟರ್ ಪಂದ್ಯದಲ್ಲಿ ಎದುರಾಗಲಿವೆ ಎನ್ನುವ ಊಹೇ ಯಾರಿಗೂ ಇರಲಿಲ್ಲ. ಆದರೆ ಈಗ ಕಥೆ ಬದಲಾಗಿದೆ, ಐಪಿಎಲ್-2024 ಶುರವಾತಿನಿಂದ ಕೊನೆವರೆಗೂ ಪಾಯಿಂಟ್ಸ್ ಟೇಬಲ್ ಟಾಪರ್ ಆಗಿದ್ದ ರಾಜಸ್ಥಾನ್, ಆರ್ಸಿಬಿ ವಿರುದ್ಧ ಸೆಣಸಲಿದೆ.
ಇನ್ನು, ಕ್ವಾಲಿಫೈಯರ್-1ರಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ನಂತರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್ಸಿಬಿ ಮುಖಾಮುಖಿ ಆಗಲಿವೆ.
ಐಪಿಎಲ್ ಮೊದಲಾರ್ಧದಲ್ಲಿ ಆರ್ಸಿಬಿ ತಾನು ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿತ್ತು. ಅದಾದ ಬಳಿಕ ನಡೆದ 6 ಪಂದ್ಯಗಳಿಗೆ ಆರು ಪಂದ್ಯಗಳು ಗೆದ್ದು ಪ್ಲೇ ಆಫ್ ಪ್ರವೇಶಿಸಿದೆ. ಇತ್ತು ಮೊದಲಾರ್ಧದಲ್ಲಿ 7ರಲ್ಲಿ 6 ಪಂದ್ಯ ಗೆದ್ದು ಟೇಬಲ್ ಟಾಪರ್ ಆಗಿದ್ದ ರಾಜಸ್ಥಾನ್ ಬಳಿಕ ಸಾಲು ಸಾಲು ಮ್ಯಾಚ್ಗಳಲ್ಲಿ ಸೋತಿದೆ. ಕೊನೆಗೂ 10ನೇ ಸ್ಥಾನದಲ್ಲಿ ಆರ್ಸಿಬಿ ಜತೆಗೆ ಮೊದಲ ಸ್ಥಾನದಲ್ಲಿ ರಾಜಸ್ಥಾನ್ ಪ್ಲೇ ಆಫ್ನಲ್ಲಿ ಸೆಣಸಲಿದೆ.