ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು (ಡಿ.13) ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಇನ್ನೂ ನಟ ದರ್ಶನ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ವಿಚಾರ ಕೇಳಿ ಸ್ಯಾಂಡಲ್ವುಡ್ ನಟ ನಟಿಯರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಗೂ ಸ್ಟೋರಿ ಶೇರ್ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಹ್ಯಾಪಿ ನ್ಯೂಸ್ ಎಂದು ನಟಿ ರಕ್ಷಿತಾ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ.ಹ್ಯಾಪಿ ನ್ಯೂಸ್, ಹ್ಯಾಪಿ ಡೇ ಎಂದು ದರ್ಶನ್ಗೆ ಜಾಮೀನು ಸಿಕ್ಕ ಖುಷಿಯನ್ನು ರಕ್ಷಿತಾ ಪ್ರೇಮ್ ಸಂಭ್ರಮಿಸಿದ್ದಾರೆ. ಅಂದಹಾಗೆ, ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಹಲವು ವರ್ಷಗಳಿಂದ ಸ್ನೇಹಿತರು. ದರ್ಶನ್ ಜೊತೆಗೆ ಸುಂಟರಗಾಳಿ, ಕಲಾಸಿಪಾಳ್ಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ ಸಂದರ್ಭದಲ್ಲಿ ರಕ್ಷಿತಾ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿ ಬಂದಿದ್ದರು.
ಇನ್ನು ನಟ ಧನ್ವೀರ್ ಗೌಡ ದರ್ಶನ್ ಜೊತೆಗೆ ವೇದಿಕೆ ಮೇಲೆ ನಿಂತುಕೊಂಡಿರೋ ಫೋಟೋದಲ್ಲಿ ಉಸಿರು ಇರುವವರೆಗೂ ಇರುತ್ತೇವೆ ನಿಮ್ಮಿಂದೆ ಅಂತ ಬರೆದುಕೊಂಡಿದ್ದಾರೆ. ಅದಕ್ಕೆ ‘ಕಾಟೇರ’ ಚಿತ್ರದ ಸಾಂಗ್ ಬಿಜಿಎಂ ಸೇರಿಸಿದ್ದಾರೆ.
ಮತ್ತೊಂದು ಕಡೆ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತರುಣ್ ಸುಧೀರ್ ಅವರು ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು ಅಂತ ದರ್ಶನ್ ಅವರ ಫೋಟೋವನ್ನು ಶೇರ್ ಮಾಡಿಕೊಂದ್ದಾರೆ, ಜೊತೆಗೆ ಸೋನಲ್ ಕಾಟೇರ ಸಿನಿಮಾದ ಸಾಂಗ್ ಜೊತೆಗೆ ಇಮೋಜಿ ಹಾಕಿಕೊಂಡಿದ್ದಾರೆ.