ಬೇಲ್ ಪಡೆದ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ಕೂಡ ಜೈಲಿಂದ ರಿಲೀಸ್ ಆಗಿದ್ದಾರೆ. ಕಾರು ಹತ್ತಿದ್ದೇ ತಾಯಿಯ ತೊಡೆ ಮೇಲೆ ಮಲಗಿ ಕಣ್ಣೀರು ಹಾಕಿದ್ದಾರೆ ಪವಿತ್ರಗೌಡ. ಈ ವೇಳೆ ಮಗಳಿಗೆ ಧೈರ್ಯದ ಮಾತುಗಳು ಹೇಳಿದ್ದಾರೆ ತಾಯಿ ಭಾಗ್ಯ ಆಗಿದ್ದು ಆಗಿದೆ ನೀನು ಧೈರ್ಯವಾಗಿ ಇರು ಎಂದು ತಾಯಿ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾರ್ಗ ಮಧ್ಯೆಯೂ ದೇವಸ್ಥಾನಕ್ಕೆ ಪವಿತ್ರ ಭೇಟಿ ಕೊಟ್ಟಿದ್ದಾರೆ. ವಜ್ರ ಮುನೇಶ್ವರ ದೇವಾಸ್ಥಾನಕ್ಕೆ ನೇರವಾಗಿ ಪವಿತ್ರ ಗೌಡ ಭೇಟಿ ಕೊಟ್ಟಿದ್ದಾರೆ.
ಕನಕಪುರ ರಸ್ತೆಯ ತಲಘಟ್ಟಪುರದಲ್ಲಿರುವ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ ಪವಿತ್ರಾ ಗೌಡ ಅವರು ತೀರ್ಥಸ್ನಾನ ಮಾಡಿದರು. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ.ಪವಿತ್ರಾ ಗೌಡ ಅವರು ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದರು. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪವಿತ್ರಾ ತಾಯಿ ಭಾಗ್ಯಮ್ಮನವರು ಪೂಜಾರಿಗಳಿಗೆ ಹೇಳಿದರು. ಹೀಗಾಗಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಲಾಗಿದೆ.
ತಲಘಟ್ಟಪುರದ ವಜ್ರಮುನೇಶ್ವರ ಪವಿತ್ರಗೌಡ ತಾಯಿಯ ಮನೆ ದೇವರು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಪವಿತ್ರಗೌಡ ತಾಯಿಗೆ ಕಣ್ಣಿನ ಸಮಸ್ಯೆ ಆಗಿ ದೃಷ್ಟಿ ಕೂಡ ಹೋಗಿತ್ತು ಎನ್ನಲಾಗಿದೆ. ಆ ವೇಳೆ ಮುನೇಶ್ವರನಿಗೆ ಹರಕೆ ಕಟ್ಟಿ ಪಾದಯಾತ್ರೆ ಮಾಡಿ ಪೂಜೆ ಸಲ್ಲಿಸಿದ್ದರಂತೆ ಪವಿತ್ರ ತಾಯಿ. ಮುನೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಪವಿತ್ರ ತಾಯಿಗೆ ದೃಷ್ಟಿ ಬಂದಿತ್ತು ಎನ್ನಲಾಗಿದೆ.
ದೃಷ್ಟಿ ಬಂದ ನಂತರ ವಜ್ರಮುನೇಶ್ವರ ಸನ್ನಿಧಿಯಲ್ಲಿ ಪವಿತ್ರ ಮನೆಯವರು ಪೂಜೆ ಮಾಡಿದ್ದರಂತೆ. ಪವಿತ್ರ ಮನೆಯವರು ಮಾಡಿದ್ದ ಪೂಜೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಮುನೇಶ್ವರ ಅಂದ್ರೆ ಪವಿತ್ರಗೌಡ ಕುಟುಂಬಕ್ಕೆ ಇನ್ನಿಲ್ಲದ ಭಕ್ತಿ. ಮಗಳು ಜೈಲು ಪಾಲಾದ ನಂತ್ರ ಮುನೇಶ್ವರನಿಗೆ ಹರಕೆಯನ್ನು ಹೊತ್ತಿದ್ದರಂತೆ ಪವಿತ್ರಾ ತಾಯಿ. ಹರಕೆ ತೀರಿಸೋ ಸಲುವಾಗಿ ಜೈಲಿಂದ ಬಿಡುಗಡೆಯಾದ ಕೂಡಲೇ ದೇವಸ್ಥಾನಕ್ಕೆ ಹೋಗಿದ್ದಾರೆ ಪವಿತ್ರಾ. ಬಳಿಕ ಅಲ್ಲಿಂದ ತಾಯಿ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.