ಸ್ಯಾಂಡಲ್ವುಡ್ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸರ್ಫಿಂಗ್ ಮಾಡಿದ್ದಾರೆ. ಸಹೋದರಿ ಅನುಷಾ ಕೂಡ ಸಾಥ್ ಕೊಟ್ಟಿದ್ದಾರೆ. ಇಬ್ಬರೂ ಸಿಸ್ಟರ್ ಸೇರಿ ಸಮುದ್ರದಲ್ಲಿ ಸಖತ್ ಸರ್ಫಿಂಗ್ ಮಾಡಿದ್ದಾರೆ. ಆದರೆ, ಇದು ಇವರಿಗೆ ಮೊದಲ ಅನುಭವೇ ಆಗಿದೆ. ಕೋವಲಂ ಬೀಚ್ ಅಲ್ಲಿಯೇ ಈ ಸ್ಟರ್ಸ್ ಸರ್ಫಿಂಗ್ ಮಾಡಿದ್ದಾರೆ. ಹಾಗೇನೆ ತಮ್ಮ ಫ್ರೀ ಟೈಮ್ ಅನ್ನ ಈ ರೀತಿ ಎಂಜಾಯ್ ಮಾಡಿದ್ದಾರೆ.
ಇವರಿಗೆ ಈ ಮೊದಲ ಅನುಭವದ ಸಮಯದಲ್ಲಿ ಒಂದು ವಿಶೇಷ ಅನುಭವ ಕೂಡ ಆಗಿದೆ. ಟ್ರಯಲ್ ಅಂಡ್ ಎರರ್ ಅಂತೀವಲ್ಲ. ಆ ರೀತಿಯ ಕ್ಷಣಗಳನ್ನ ಕೂಡ ಕ್ಯಾಪ್ಚರ್ ಮಾಡಿದ್ದಾರೆ. ಫೋಟೋ ಮತ್ತು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಆಶಿಕಾ ರಂಗನಾಥ್ ಸಖತ್ ಆಗಿಯೇ ಸರ್ಫಿಂಗ್ ಮಾಡಿದ್ದಾರೆ. ತಮ್ಮ ಶೂಟಿಂಗ್ ಕೆಲಸದಿಂದ ಬಿಡುವು ಸಿಕ್ಕದೇ ತಡ, ನೇರವಾಗಿ ಕೋವಲಂ ಬೀಚ್ಗೆ ಬಂದಿದ್ದಾರೆ. ಬಂದು ಸಖತ್ ಸರ್ಫಿಂಗ್ ಮಾಡಿದ್ದಾರೆ. ಆದರೆ, ಇದು ಇವರಿಗೆ ಮೊದಲ ಅನುಭವವೇ ಆಗಿದೆ. ಹಾಗಂತ ಇವರು ಸುಮ್ನೆ ಏನೂ ಸಮುದ್ರಕ್ಕೆ ಇಳಿದಿಲ್ಲ ಬಿಡಿ.ಯಾಕೆಂದ್ರೆ, ಇಲ್ಲಿಯ ಸರ್ಫಿಂಗ್ ಸ್ಕೂಲ್ ಅಲ್ಲಿ ತರಬೇತಿ ಪಡೆದಿದ್ದಾರೆ. ತರಬೇತಿ ಪಡೆದ ಮೇಲೇನೆ ನೀರಿಗೆ ಇಳಿದಿದ್ದಾರೆ. ಹಾಗಾಗಿಯೇ ಮೊದಲ ಪ್ರಯತ್ನದಲ್ಲಿಯೇ ಅದ್ಭುತ ಅನಿಸೋ ಸರ್ಫಿಂಗ್ ಮಾಡಿದ್ದಾರೆ.
ಆದರೆ, ಮೊದಲ ಅನುಭವ ಅಲ್ವೇ? ಒಂದಷ್ಟು ತಪ್ಪುಗಳನ್ನು ಮಾಡಿದ್ದಾರೆ.ಬ್ಲೂಪರ್ಸ್ಗಳನ್ನೂ ಇವೆ. ಅವುಗಳನ್ನ ಈಗಲೇ ರಿಲೀಸ್ ಮಾಡೋದಿಲ್ಲ. ಆದಷ್ಟು ಬೇಗ ಅವುಗಳನ್ನ ಕೂಡ ಹಂಚಿಕೊಳ್ಳುತ್ತೇವೆ ಅಂತಲೇ ಆಶಿಕಾ ರಂಗನಾಥ್ ಹೇಳಿಕೊಂಡಿದ್ದಾರೆ. ಹಾಗೇನೆ ಅವರ ಸಹೋದರಿ ಅನುಷಾ ಕೂಡ ಇಲ್ಲಿ ಸಾಥ್ ಕೊಟ್ಟಿದ್ದಾರೆ.
ಅಕ್ಕ ಮತ್ತು ತಂಗಿ ಇಬ್ಬರೂ ಒಟ್ಟಿಗೇನೆ ಇಲ್ಲಿ ಸರ್ಫಿಂಗ್ ಮಾಡಿದ್ದಾರೆ. ಈ ಮೂಲಕ ಮಸ್ತ್ ಮಜಾ ಮಾಡಿದ್ದಾರೆ. ಹಾಗೇನೆ ಈ ಕ್ಷಣದ ವಿಡಿಯೋ ಮತ್ತು ಫೋಟೋಗಳನ್ನ ಆಶಿಕಾ ರಂಗನಾಥ್ ತಮ್ಮ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.