ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದ ನಟಿ ಸಪ್ತಮಿ ಗೌಡ ಇದೀಗ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಕಾಂತಾರ ಚೆಲುವೆ ಸಪ್ತಮಿ ಗೌಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ಸಪ್ತಮಿ ಗೌಡ ಆಗಾಗ ಮಸ್ತ್ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸ್ಯಾಂಡಲ್ವುಡ್ ಚೆಲುವೆ ಸಪ್ತಮಿ ಫೋಟೋಗಳಿಗೆ ಫ್ಯಾನ್ಸ್ ಕೂಡ ಕಾಯ್ತಿರುತ್ತಾರೆ.
ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಸಪ್ತಮಿಗೌಡ ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಕ್ಯಾಮೆರಾ ಹಿಡಿದು ಫೋಟೋಗಳಿಗೆ ಚೆಂದದ ಪೋಸ್ ಕೊಟ್ಟಿದ್ದಾರೆ. ಸಪ್ತಮಿ ಸ್ಮೈಲ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಂತಾರ ಚೆಲುವೆ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗ್ತಿದೆ.
ಕ್ರೀಮಿ ಶರ್ಟ್ ಜೊತೆಗೆ ಶಾರ್ಟ್ಸ್ ತೊಟ್ಟ ಸಪ್ತಮಿ ಗೌಡ ಕ್ಯಾಮೆರಾ ಹಿಡಿದು ರಸ್ತೆಯಲ್ಲಿ ಓಡಾಡಿದ್ದಾರೆ. ಸಪ್ತಮಿ ಸಿಟಿ ರೌಂಡ್ಸ್ ಫೋಟೋ ನೋಡಿದ ಫ್ಯಾನ್ಸ್, ಸಪ್ತಮಿ ಗೌಡ ಕ್ಯಾಮೆರಾ ಕಣ್ಣು ಯಾರನ್ನು ಹುಡುಕುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ.
ನಟ ಡಾಲಿ ಧನಂಜಯ್ ಜೊತೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ, ಕಾಂತಾರ ಸಿನಿಮಾ ಬಳಿಕ ಫುಲ್ ಶೈನ್ ಆಗ್ತಿದ್ದಾರೆ. ಸಪ್ತಮಿ ಗೌಡ ಅವರನ್ನು ಸಾಲು ಸಾಲು ಆಫರ್ಗಳು ಅರಸಿ ಬರ್ತಿದೆ.
ಈಗ ತೆಲುಗಿನ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ರು. ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸಪ್ತಮಿ ಗೌಡ ತಿಳಿಸಿದ್ರು. ನಟ ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಕೂಡ ಶೂಟಿಂಗ್ನಲ್ಲಿ ಭಾಗಿಯಾಗಲು ತೆರಳೋದಾಗಿ ಸಪ್ತಮಿ ಗೌಡ ಈ ಹಿಂದೆ ಹೇಳಿದ್ರು
ಇತ್ತೀಚಿಗಷ್ಟೇ ನಟಿ ಸಪ್ತಮಿ ಗೌಡ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರದಲ್ಲಿ ಯುವ ರಾಜ್ಕುಮಾರ್ಗೆ ಸಪ್ತಮಿ ಗೌಡ ಜೋಡಿಯಾಗಿದ್ರು. ಸಿನಿಮಾ ಕೂಡ ಯಶಸ್ಸು ಕಂಡಿತು. ಈ ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತಾಡಿದ್ದ ಸಪ್ತಮಿ ಗೌಡ ‘ಕಾಂತಾರಾ: ಚಾಪ್ಟರ್ 1’ ಸಿನಿಮಾದಲ್ಲಿ ನಾನು ನಟಿಸಲ್ಲ ಎಂದು ಹೇಳಿದ್ದರು.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ರು. ಈ ಮೂಲಕ ಬಾಲಿವುಡ್ಗೆ ನಟಿ ಸಪ್ತಮಿ ಎಂಟ್ರಿ ಕೊಟ್ರು. ಸಣ್ಣ ಪಾತ್ರದಲ್ಲೇ ಎಲ್ಲರ ಗಮನ ಸೆಳೆದ್ರು. ಕಾಂತಾರ ಸಿನಿಮಾ ಬಳಿಕ ನಟಿಗೆ ಬೇರೆ ಬೇರೆ ಭಾಷೆಗಳಿಂದಲೂ ಆಫರ್ಗಳ ಸುರಿಮಳೆ ಆಗ್ತಿದೆ. ಆದ್ರೆ ಆಯ್ಕೆಯಲ್ಲಿ ಎಡವದಂತೆ ಸಪ್ತಮಿ ಗೌಡ ಅಳೆದು ತೂಗಿ ಪಾತ್ರಗಳನ್ನು ಸೆಲೆಕ್ಟ್ ಮಾಡಿಕೊಳ್ತಿದ್ದಾರೆ. ಸಪ್ತಮಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.