ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಅಂಡರ್ 19 ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಸ್ಟ್ 31ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಹು-ಫಾರ್ಮ್ಯಾಟ್ ಸರಣಿಯ ವೇಳಾ ಪಟ್ಟಿಯೊಂದಿಗೆ ಅಂಡರ್ 19 ತಂಡವನ್ನು ಪ್ರಕಟಿಸಿದೆ. ಸಮಿತ್ ಅವರನ್ನು ಏಕದಿನ ಮತ್ತು ನಾಲ್ಕು ದಿನದ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್ 19 ಸರಣಿಯು ಸೆಪ್ಟೆಂಬರ್ 21ರಿಂದ ಪ್ರಾರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ. ಇನ್ನು ಉತ್ತರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮೊಹಮ್ಮದ್ ಅಮಾನ್ 50 ಓವರ್ಗಳ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ನಾಲ್ಕು ದಿನಗಳ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
ದ್ರಾವಿಡ್ ಮಗ ಸಮಿತ್ ಇತ್ತೀಚೆಗೆ ಮೊದಲ ಹಿರಿಯ ಪುರುಷರ ಟಿ20 ಪಂದ್ಯಾವಳಿಯಲ್ಲಿ ಮಹಾರಾಜಿ ಟಿ20 ಟ್ರೋಪಿಯಲ್ಲಿ ಆಡಿದ್ದರು. ಮೈಸೂರು ವಾರಿಯರ್ಸ್ ತಂಡದ ಭಾಗವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಈತ 7 ಇನ್ನಿಂಗ್ಸ್ನಲ್ಲಿ 114 ಸ್ಟ್ತೈಕ್ ರೇಟ್ನಲ್ಲಿ 82 ರನ್ ಗಳಿಸಿದ್ದಾರೆ.