ಕಾಟೇರ ಚಿತ್ರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಕಾರ್ಯಕ್ರಮಗಳು ಜೋರಾಗಿ ಶುರುವಾಗಿವೆ. ಆಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ .ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ.
ಇದೀಗ ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಲ್ ಪಾರ್ಟಿ ಮಾಡಿದ್ದಾರೆ. ಕುಟುಂಬದ ಜೊತೆ ಬ್ಯಾಚುಲರೇಟ್ ಪಾರ್ಟಿಯಲ್ಲಿ ಸೋನಲ್ ಕುಣಿದು ಕುಪ್ಪಳಿಸಿದ್ದಾರೆ. ಮಗಳಿಗಾಗಿ ಸರ್ಪ್ರೈಸ್ ಪಾರ್ಟಿ ಕೊಟ್ಟ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಸೋನಲ್ ತಾಯಿ ಮತ್ತು ತಂಗಿ.