ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಅತಿಥಿಯಾಗಿ ಡ್ಯಾನ್ಸ್ ಶೋಗೆ ಎಂಟ್ರಿ ಕೊಟ್ಟಿದ್ದ ನವ ಜೋಡಿಗೆ ಎಲ್ಲರೂ ಶುಭ ಹಾರೈಸಿದ್ದರು. ಜೊತೆಗೆ ಹೊಸದಾಗಿ ಮದುವೆಯಾಗಿದ್ದ ಇಬ್ಬರಿಗೂ ಡ್ಯಾನ್ಸ್ ಮಾಡಿಸಿದ್ದಾರೆ. ಇದೇ ಮೊದಲ ಬಾರಿಗೆ ಮದುವೆಯಾದ ಬಳಿಕ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆಗೆ ಸ್ಯಾಂಡಲ್ವುಡ್ ಗಣ್ಯರು ಬಂದು ನವಜೋಡಿಗೆ ಶುಭ ಹಾರೈಸಿದ್ದರು. ಮದುವೆಯಾದ ಬಳಿಕ ಮೊದಲ ಬಾರಿಗೆ ರಿಯಾಲಿಟಿ ಶೋಗೆ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಸರ್ಪ್ರೈಸ್ ರೀತಿಯಲ್ಲಿ ಶೋಗೆ ನಟಿ ಸೋನಲ್ ಮೊಂತೆರೋ ಕೊಟ್ಟಿದ್ದಾರೆ.
ಡಿಕೆಡಿ ಶೋಗೆ ತರುಣ್ ಸುಧೀರ್ ಅವರು ಗೆಸ್ಟ್ ಆಗಿ ಬಂದಿದ್ದರು. ಇದೇ ವೇಳೆ ನಿರೂಪಕಿ ಅನುಶ್ರೀ ಅವರು ತರುಣ್ ಸುಧೀರ್ ಪತ್ನಿ ಸೋನಲ್ ಅವರನ್ನು ಶ್ರೀಗಂಧದ ಗೊಂಬೆ ಹಾಡಿನ ಮೂಲಕ ತುಂಬಾ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದರು. ಸೋನಲ್ ಅವರನ್ನು ನೋಡಿದ ಕೂಡಲೇ ನಿರ್ದೇಶಕ ತರುಣ್ ಸುಧೀರ್ ಶಾಕ್ ಆಗಿದ್ದಾರೆ. ಇಬ್ಬರನ್ನು ವೇದಿಕೆಗೆ ಕರೆಸಿಕೊಂಡ ಅನುಶ್ರೀ ಕೇಳಿದ ಪ್ರಶ್ನೆ ಇಬ್ಬರು ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ತುರುಣ್ ಅವರನ್ನು ಪಡೆಯೋಕೆ ನಾನು ತುಂಬಾ ಪುಣ್ಯ ಮಾಡಿದ್ದೆ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಕೊಂಡ ಎಲ್ಲರೂ ಫುಲ್ ಖುಷ್ ಆಗಿದ್ದಾರೆ.