ಇಂದು ಬೆಳಗ್ಗೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಬಾಂದ್ರಾ ಟರ್ಮಿನಲ್ನ ಪ್ಲಾಟ್ಫಾರ್ಮ್ ನಂಬರ್ ಒಂದರಲ್ಲಿ ಬೆಳಗ್ಗೆ 5.56ಕ್ಕೆ ಈ ಘಟನೆ ನಡೆದಿದೆ. 22921 ಬಾಂದ್ರಾ-ಗೋರಖ್ಪುರ ಎಕ್ಸ್ಪ್ರೆಸ್ ರೈಲು ಹತ್ತುವ ವೇಳೆ ವಿಪರೀತ ಜನದಟ್ಟಣೆ ಉಂಟಾಗಿತ್ತು ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಮಲ್ಟಿಪ್ಲೆಕ್ಸ್ ಸಿನಿಮಾ ಟಿಕೆಟ್ ರೇಟ್ಗೆ ಸರ್ಕಾರ ಕಡಿವಾಣ..!
ಅದೃಷ್ಟವಶಾತ್ ಈ ದುರಂತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಒಂಭತ್ತು ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಬಾ ಆಸ್ಪತ್ರೆಯ MO ವೈದ್ಯ ರಿತೇಶ್, 9 ಜನರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಬಲ್ಲ ಮಾಹಿತಿಯ ಪ್ರಕಾರ, ಬಾಂದ್ರಾ ಗೋರಖ್ಪುರ ಎಕ್ಸ್ಪ್ರೆಸ್ ರೈಲು ರೈಲು 5:10 ಕ್ಕೆ ಹೊರಡಬೇಕಿತ್ತು. ಆದರೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಈ ಕಾಲ್ತುಳಿತ ಉಂಟಾಗಿದ್ದರಿಂದ ಇಂದು ಬೆಳಗ್ಗೆ ರೈಲು ಪುನರ್ ಆರಂಭಗೊಂಡಿದ್ದು, ಮಧ್ಯಾಹ್ನ 3ರಿಂದ 3.30ರ ಸುಮಾರಿಗೆ ರೈಲು ಪ್ಲಾಟ್ಫಾರ್ಮ್ಗೆ ತಡವಾಗಿ ಬಂದಿದೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಜನರಲ್ ಬೋಗಿ ಹತ್ತಲು ಜನರ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇದನ್ನು ಓದಿ: ಮಠದ ಕೋಟಿ ಕೋಟಿ ರೂಪಾಯಿ ದೋಚಿದ್ರಾ ಶಾಸಕ ಸೈಲ್..?
ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ರಜೆ ಇರುವ ಕಾರಣ, ರೈಲುಗಳಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ಹೀಗಾಗಿ ಊರಿಂದ ಇನ್ನೊಂದು ಊರಿಗೆ ಹೋಗುವವರು ಗೋರಖ್ಪುರ ಎಕ್ಸ್ಪ್ರೆಸ್ ರೈಲು ಹತ್ತಲು ಬಾಂದ್ರಾ ನಿಲ್ದಾಣದಲ್ಲಿ ಬಂದಾಗ ಪ್ರಯಾಣಿಕರಲ್ಲಿ ಗಲಾಟೆ ನಡೆದಿದ್ದು, ಬಳಿಕ ಕಾಲ್ತುಳಿತ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.