ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-0 ಸರಣಿಯಿಂದ ಗೆದ್ದು ಬೀಗಿದೆ. ಈಗ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಕೊನೆಯ ಪಂದ್ಯ ಗೆದ್ದು ಬಾಂಗ್ಲಾ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಟೀಮ್ ಇಂಡಿಯಾ, ಬಾಂಗ್ಲಾದೇಶ ನಡುವಿನ ಕೊನೆ ಟಿ20 ಪಂದ್ಯ ಹೈದರಾಬಾದ್ನಲ್ಲಿರೋ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಕೊನೆ ಟಿ20 ಪಂದ್ಯಕ್ಕೆ ಕ್ಯಾಪ್ಟನ್ ಸೂರ್ಯ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ಭಾರತ ಸತತ 2 ಪಂದ್ಯ ಗೆದ್ದಿರೋ ಕಾರಣ 3ನೇ ಪಂದ್ಯದಲ್ಲಿ ಪ್ರಯೋಗ ನಡೆಯಲಿದೆ.
ಸಂಜು ಸ್ಯಾಮ್ಸನ್ಗೆ ಕೊಕ್
ಬಾಂಗ್ಲಾದೇಶ ವಿರುದ್ಧದ ಮೊದಲನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾದ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 2ನೇ ಮ್ಯಾಚ್ನಲ್ಲಿ ಕೇವಲ 10 ರನ್ಗೆ ಔಟಾದ್ರು. ಎರಡು ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಇಂಪ್ಯಾಕ್ಟ್ ಇನ್ನಿಂಗ್ಸ್ ಏನು ಆಡಲಿಲ್ಲ. ಹಾಗಾಗಿ ಕೊನೆ ಪಂದ್ಯದ ಪ್ಲೇಯಿಂಗ್ ಎಲೆವೆನ್ನಿಂದ ಸ್ಯಾಮ್ಸನ್ಗೆ ಕೊಕ್ ಸಿಗೋ ಸಾಧ್ಯತೆ ಇದೆ.
86 ರನ್ಗಳಿಂದ ಗೆದ್ದು ಬೀಗಿದ್ದ ಭಾರತ
ಇತ್ತೀಚೆಗೆ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 86 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. 2ನೇ ಟಿ20 ಪಂದ್ಯ ಗೆಲ್ಲಲು ಪ್ರಮುಖ ಕಾರಣ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ. 3ನೇ ಪಂದ್ಯದಲ್ಲೂ ಭಾರತ ಕಮಾಲ್ ಮಾಡಲು ಎದುರು ನೋಡುತ್ತಿದೆ.