ಕಿಚ್ಚ ಸುದೀಪ್ ತಾಯಿ ಸರೋಜಾ ಅವರ ನಿಧನಕ್ಕೆ ಇಡೀ ಕನ್ನಡ ಸಿನಿಮಾರಂಗ ಸಂತಾಪ ಸೂಚಿಸುತ್ತಿದೆ. ಸಿನಿಮಾ ಸೆಟ್ನಿಂದಲೇ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಬೆಳಗ್ಗೇನೆ ಸಂತಾಪ ಸೂಚಿಸಿದ್ದಾರೆ. ಇರೋ ತಮ್ಮ ಪ್ರೆಸ್ ಮೀಟ್ ಅನ್ನು ಕೂಡ ಮುಂದೂಡಿದ್ದಾರೆ. ಆದರೆ, ಬಿಗ್ ಬಾಸ್ನಿಂದ ಹೊರ ಬಂದ ಮತ್ತೊಬ್ಬ ಸ್ಪರ್ಧಿ ರಂಜಿತ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ವಿಷಯ ತಿಳಿದ ಕೂಡಲೇ ಬೇಸರಪಟ್ಟಿದ್ದಾರೆ. “ಅಮ್ಮ ಹೋಗಿರೋ ವಿಷಯ ತಿಳಿದು ತುಂಬಾನೆ ಬೇಸರ ಆಯಿತು. ಅಮ್ಮನ ಕಳೆದುಕೊಂಡಿರೋ ನೋವು. ಅಮ್ಮನ ಕಳೆದುಕೊಂಡವರಿಗೇನೆ ಗೊತ್ತಿರುತ್ತದೆ” ಅಂತಲೂ ರಂಜಿತ್ ಕುಮಾರ್ ಹೇಳಿಕೊಂಡು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಕೂಡ ಮಾಡಿದ್ದಾರೆ.
https://www.instagram.com/reel/DBVqnrpPKH3/?utm_source=ig_web_copy_link
ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಮಾಧ್ಯಮವೊಂದಕ್ಕೆ ಮಾತನಾಡಿದ್ರು. ಅದು ಬಿಟ್ರೆ, ಈಗಲೇ ಸುದೀಪ್ ತಾಯಿಯ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ರಂಜಿತ್ ಕುಮಾರ್ ಎಲ್ಲೂ ಮಾತನಾಡಿರಲಿಲ್ಲ. ಆದರೆ, ಎಂತಹ ಟೈಮ್ ನೋಡಿ, ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸೋಕೆ ವಿಡಿಯೋ ಮಾಡುವಂತೆ ಆಯಿತು. ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ರಂಜಿತ್ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ತಾಯಿ ಕಳೆದುಕೊಂಡ ನೋವು ಎಲ್ಲರಿಗೂ ತಿಳಿಯೋದಿಲ್ಲ. ಅಮ್ಮ ಕಳೆದುಕೊಂಡವ್ರಿಗೇನೆ ಆ ನೋತು ಗೊತ್ತಿರುತ್ತಿದೆ. “ಸುದೀಪ್ ಅಣ್ಣ ನೀವು ಸ್ಟ್ರಾಂಗ್ ಆಗಿಯೇ ಇರಬೇಕು. ನಿಮ್ಮ ಜೊತೆಗೆ ನಾವು ಇದ್ದೇವೆ. ಆ ತಾಯಿ ಚಾಮುಂಡಿ ನಿಮಗೆ ಈ ನೋವು ಭರಿಸೋ ಶಕ್ತಿಯನ್ನ ಕೊಡಲಿ” ಅಂತಲೂ ರಂಜಿತ್ ಕುಮಾರ್ ಹೇಳಿದ್ದಾರೆ.ಅಣ್ಣ ನೀವು ಸ್ಟ್ರಾಂಗ್ ಆಗಿಯೇ ಇರಬೇಕು. ದಯವಿಟ್ಟು ಸ್ಟ್ರಾಂಗ್ ಆಗಿಯೇ ಇರಿ, ನಾವು ನಿಮ್ಮ ಜೊತೆಗೆ ಇರುತ್ತೇವೆ ನಾವು ನಿಮ್ಮನ್ನ ತುಂಬಾನೆ ಪ್ರೀತಿಸುತ್ತೇವೆ ಅಂತಲೂ ರಂಜಿತ್ ಕುಮಾರ್ ಈ ಒಂದು ವಿಡಿಯೋದಲ್ಲಿ ಹೇಳಿದ್ದಾರೆ.