ಮೋಹನ್ಲಾಲ್ ಅವರಿಗೆ ತೀವ್ರ ತರವಾದ ಜ್ವರ, ಡುಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಇತರೆ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ , ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿರುವ ಅವರಿಗೆ ಐದು ದಿನಗಳವರೆಗೆ ಸಾರ್ವಜನಿಕರಿಂದ ದೂರವಿರಲು ಸೂಚಿಸಲಾಗಿದ್ದುಯ, ಸರಿಯಾದ ಔಷದಿ ಹಾಗೂ ವಿಶ್ರಾಂತಿಯನ್ನು ಪಡೆಯಲು ಸೂಚಿಸಲಾಗಿದೆ ಎಂದು ವರದಿಯಾಗಿದೆ. ಎಲ್2 ಎಂಪುರಾನ್ ಚಿತ್ರೀಕರಣದ ಬಳಿಕ ಚೊಚ್ಚಲ ನಿರ್ದೇಶನದ ಬರೋಜ್ ನ ಪೋಸ್ಟ್ ಪ್ರೊಡಕ್ಷನ್ ಕೆಲಸಸವನ್ನು ಮುಗಿಸಿ ಮೋಹನ್ಲಾಲ್ ಗುಜರಾತ್ನಿಂದ ಕೊಚ್ಚಿಗೆ ಮರಳಿದಾಗ ಅವರ ಆರೋಗ್ಯ ಹದಗೆಟ್ಟಿದೆ. ಬರೋಜ್ ಇದೇ ಅಕ್ಟೋಬರ್ 9ರಂದು ರಿಲೀಸ್ ಆಗಲಿದೆ. ಈ ಹಿಂದೆಯೇ ಸಿನಿಮಾ ರಿಲೀಸ್ ಆಗಬೇಕಿತ್ತು ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸದ ವಿಳಂಬದಿಂದಾಗಿ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ .