ಸ್ಯಾಂಡಲ್ವುಡ್ನ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು-ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನ ಪೂರ್ಣಿಮಾ ಪಾಲೇಸ್ನಲ್ಲಿಯೇ ಈ ಜೋಡಿ ಮದುವೆ ನೆರವೇರಿದೆ. ತುಲಾ ಲಗ್ನ ಮುಹೂರ್ತದಲ್ಲಿಯೇ ಮಾಂಗಲ್ಯದ ಧಾರಣೆ ನಡೆದಿದೆ. ಇವರ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಮದುವೆ ನೆರವೇರಿದೆ. ತರುಣ್ ಸುಧೀರ್ ಅವರ ಸಂಪ್ರದಾಯದಂತೇನೆ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಹಲವಾರು ಸೆಲೆಬ್ರಿಟಿಗಳು ತರುಣ್ ಸುಧೀರ್ ಹಾಗೂ ಸೋನಲ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ನಟ ಶರಣ್ ದಂಪತಿ, ನಟಿ ಶೃತಿ ಕುಟುಂಬಸ್ಥರು, ನೆನಪಿರಲಿ ಪ್ರೇಮ್ ದಂಪತಿ ಸೇರಿದಂತೆ ಇನ್ನೂ ಹಲವಾರು ಸ್ಟಾರ್ ನಟ ನಟಿಯರು ಬಂದಿದ್ದಾರೆ. ಸದ್ಯ ಸ್ಟಾರ್ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕಲ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಸದ್ಯ ತರುಣ್ ಸುಧೀರ್ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.