ಪ್ರತಿ ವರ್ಷ ಮಳೆಗಾಲ ಬಂದ್ರೆ ಸಾಕು ಎಳನೀರಿನ ಬೆಲೆ ತುಂಬ ಕಡಿಮೆ ಆಗುತ್ತಿತ್ತು. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.
ಈ ವರ್ಷದ ಬಿಸಿಲು ಕೊಟ್ಟಂತಹ ಎಫೆಕ್ಟ್ ಒಂದಲ್ಲ ಎರಡಲ್ಲ. ಒಂದು ಕಡೆ ನೀರಿನಿಂದಾಗಿ ಜರನು ಓದ್ದಾಡಿದ್ರೆ, ಮತ್ತೊಂದೆಡೆ ಬೇಸಿಗೆಯಲ್ಲಿ ಬೆಳೆದ ಬೆಳೆಗಳು ನೀರಿಲ್ಲದೇ ಸೊರಗಿ ಹೋದ್ವು. ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ರು. ಇನ್ನು ಬೇಸಿಗೆಯಲ್ಲಿ ನೀರಿಲ್ಲದೆ ಈ ವರ್ಷದ ತೆಂಗಿನ ಫಸಲು ಸರಿಯಾಗಿ ಬಂದಿಲ್ಲ. ಹೀಗಾಗಿ ಸೋನೆ ಮಳೆ ಬಿದ್ರು, ಎಳ ನೀರಿಗೆ ಮಾತ್ರ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ.
ಹೀಗಾಗಿ 50, 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ. ಮಳೆಗಾಲದಲ್ಲಿಯೂ ಇಷ್ಟು ಬೆಲೆ ಇರುವುದನ್ನ ಕೇಳಿ ಗ್ರಾಹಕರು ಶಾಕ್ ಆಗ್ತಾ ಇದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ 30 ರಿಂದ 40 ರೂಪಾಯಿ ಇರ್ತಿತ್ತು. ಆದರೆ ಈ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ.
ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಎಳ ನೀರನ್ನ ಕುಡಿಯಲೇಬೇಕು. ಈ ವರ್ಷದ ಬಿಸಿಲಿನ ಎಫೆಕ್ಟ್ ನಿಂದಾಗಿ ಫಸಲು ಸರಿಯಾಗಿ ಬರ್ಲಿಲ್ಲ. ಹೀಗಾಗಿ ಫಸಲು ಕಡಿಮೆ ಬರುತ್ತಿದ್ದು, ಸಿಟಿಗೆ 30% ರಷ್ಡು ಎಳ ನೀರು ಮಾತ್ರ ಪೂರೈಕೆಯಾಗುತ್ತಿದೆ.
ಎಳ ನೀರಿಗೆ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ ಅಂತ ವ್ಯಾಪಾರಸ್ಥರು ಹೇಳ್ತಿದ್ದಾರೆ.