ಸಿನಿಮಾದಲ್ಲಿ ನೋಡಿರುತ್ತೇವೆ. ಕೇಳಿರುತ್ತೇವೆ. ಯೋಗದಿಂದ ಉಸಿರಾಡುವುದನ್ನು ನಿಯಂತ್ರಿಸಬಹುದು. ಗಂಟೆಗಟ್ಟಲೆ ಉಸಿರಾಡದೆಯೂ ಜೀವಂತವಾಗಿರಬಹುದು ಎಂದು ಕೇಳಿರುತ್ತೇವೆ. ನೆನಪಿದ್ದರೆ, ದಶಕಗಳ ಹಿಂದೆ ಅಜಿತ್ ಎಂಬ ಸಿನಿಮಾ ನೆನಪಿಸಿಕೊಳ್ಳಬಹುದು. ಆ ಸಿನಿಮಾದಲ್ಲಿ ಹೀರೋ ಅಂಬರೀಷ್, ದುಷ್ಕರ್ಮಿಗಳ ಬಂಧನದಿಂದ ತಪ್ಪಿಸಿಕೊಳ್ಳಲು ಯೋಗವನ್ನೇ ಅಸ್ತ್ರ ಮಾಡಿಕೊಳ್ತಾನೆ. ಹೀರೋ ಸತ್ತ ಎಂದು ಸಮುದ್ರಕ್ಕೆ ಎಸೆಯುತ್ತಾರೆ ಹಂತಕರು. ಆದರೆ ಯೋಗದಲ್ಲಿ ನಿಷ್ಣಾತನಾಗಿದ್ದ ಹೀರೋ, ಸತ್ತಿರುವುದಿಲ್ಲ. ಉಸಿರಾಟ ನಿಯಂತ್ರಿಸಿರುತ್ತಾನೆ. ಸಮುದ್ರಕ್ಕೆ ಎಸೆದ ನಂತರ ಮತ್ತೆ ಎದ್ದು ಬರ್ತಾನೆ. ಇದು ಅಂಥದ್ದೇ ಕಥೆ. ಆದರೆ ಇದು ಸಿನಿಮಾ ಅಲ್ಲ. ರಿಯಲ್ ಸ್ಟೋರಿ. ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ. ಯೋಗಾಭ್ಯಾಸದಿಂದ ಸಾವು ತಪ್ಪಿಸಿಕೊಂಡು, ಸಮಾಧಿಯಿಂದ ಎದ್ದು ಬಂದಿರುವ ಹೆಣ್ಣು ಅರ್ಚನಾ. ಯೋಗ ಶಿಕ್ಷಕಿ. ಘಟನೆ ನಡೆದಿರುವುದು ಅಕ್ಟೋಬರ್ 23ನೇ ತಾರೀಕು.
ಅರ್ಚನಾ ಎಂಬ ಮಹಿಳೆ ಯೋಗ ಶಿಕ್ಷಕಿಯಾಗಿದ್ದು, 13 ವರ್ಷಗಳ ಹಿಂದೆ ದೇವನಹಳ್ಳಿಯ ಎಲಿಯೂರಿನ ವಿಶ್ವನಾಥ್ ಜೊತೆ ವಿವಾಹವಾಗಿದ್ದರು. ಇಬ್ಬರೂ ಮಕ್ಕಳೂ ಇದ್ದರು. ಆದರೆ ಗಂಡನಿಂದ ದೂರವಾಗಿದ್ದ ಅರ್ಚನಾ, ಪ್ರತ್ಯೇಕವಾಗಿ ವಾಸ ಮಾಡ್ತಿದ್ರು. ಗಂಡ ದೂರವಾಗಿದ್ದ ಸಮಯದಲ್ಲಿಯೇ ಗಂಡನ ಗೆಳೆಯ ಸಂತೋಷ್ ಎಂಬುವವನ ಜೊತೆ ಸಲುಗೆ ಬೆಳೆದಿತ್ತು. ಇದು ಸಂತೋಷ್ ಪತ್ನಿ ಬಿಂದುಶ್ರೀ ಕೆರಳುವಂತೆ ಮಾಡಿತ್ತು. ಆಗ ಬಿಂದುಶ್ರೀ, ಮಾಜಿ ಸೈನಿಕ ಸತೀಶ್ ರೆಡ್ಡಿಎಂಬ ವ್ಯಕ್ತಿಗೆ ಅರ್ಚನಾಳನ್ನು ಕೊಲ್ಲುವಂತೆ ಸುಪಾರಿ ಕೊಟ್ಟರು ಎನ್ನುವುದು ಸದ್ಯಕ್ಕೆ ಹೊರಬಂದಿರುವ ಕಥೆ.
ಇದನ್ನು ಓದಿ: ಬಿಗ್ ಬಾಸ್ಗೂ ದಿಗಿಲು ಹುಟ್ಟಿಸಿದ್ನಾ ಹನುಮಂತು!
ಬಿಂದುಶ್ರೀ ಅವರಿಂದ ಕಂತೆ ಕಂತೆ ಹಣ ಪಡೆದ ಸತೀಶ್, ಅರ್ಚನಾ ಕೊಲೆಗೆ ಸ್ಕೆಚ್ ಹಾಕ್ತಾನೆ. ಅರ್ಚನಾಳ ಯೋಗ ಕ್ಲಾಸ್ ಸೇರಿ ಪರಿಚಯ ಮಾಡ್ಕೊಳ್ತಾನೆ. ಆಕೆ ಕೂಡ ಸತೀಶ್ ಜೊತೆ ಆತ್ಮೀಯತೆ ಬೆಳೆಸಿಕೊಳ್ತಾರೆ. ಅದಾದ ಮೇಲೆ ಸತೀಶ್ ರೆಡ್ಡಿ ಜೊತೆ ಓಡಾಡೋಕೆ ಶುರು ಮಾಡ್ತಾರೆ. ಅಷ್ಟು ನಂಬಿಕೆ ಹುಟ್ಟಿಸಿದ ಸತೀಶ್ ರೆಡ್ಡಿಗನ್ ಶೂಟಿಂಗ್ ತರಬೇತಿಗೆ ಹೋಗೋಣ ಬಾ ಅಂತ ಕಾರಿನಲ್ಲಿ ಕರೆದುಕೊಂಡು ಹೋಗ್ತಾನೆ. ಅರ್ಚನಾ ಕೂಡಾ ನಂಬಿಕೆಯಿಂದಲೇ ಸತೀಶ್ ರೆಡ್ಡಿ ಜೊತೆಗೆ ಹೋಗ್ತಾರೆ. ಮುಂದೆ ಸತೀಶ್ ರೆಡ್ಡಿ ಜೊತೆ ಆತನ ಗೆಳೆಯರೂ ಜೊತೆಯಾಗ್ತಾರೆ. ಗನ್ ಪಾಯಿಂಟ್ನಲ್ಲಿ ಕಿಡ್ನಾಪ್ ಮಾಡ್ತಾರೆ.
ಇದನ್ನು ಓದಿ: ‘ಸುಪ್ರೀಂ’ ಶಾಕ್..?ದರ್ಶನ್ ಬೇಲ್ ಕ್ಯಾನ್ಸಲ್?
ಸತೀಶ್, ಮತ್ತವನ ಗೆಳೆಯರಾದ ರಮಣ, ನಾಗೇಂದ್ರ, ರವಿಚಂದ್ರ ಸೇರಿ ಕಾರಿನಲ್ಲಿ ಅರ್ಚನಾರ ಅತ್ಯಾಚಾರಕ್ಕೆ ಯತ್ನಿಸ್ತಾರೆ. ಅರ್ಚನಾ ವಿರೋಧ ಮಾಡ್ತಿದ್ದಂತೆ ಹಲ್ಲೆಗೈದು ಚಿಕ್ಕಬಳ್ಳಾಪುರದ ದಿಬ್ಬೂರಹಳ್ಳಿ ಬಳಿ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸ್ತಾರೆ. ಬಳಿಕ ಸತೀಶ್ ಚಾರ್ಚರ್ ವೈರ್ನಿಂದ ಕುತ್ತಿಗೆಗೆ ಬಿಗಿಯುತ್ತಾನೆ. ಅರ್ಚನಾ ಪ್ರಜ್ಞೆ ಕಳೆದುಕೊಳ್ತಾರೆ. ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿಯ ಬಳಿಯ ಕಾಡಿಗೆ ಅರ್ಚನಾರನ್ನು ಎತ್ತಿಕೊಂಡು ಹೋದ ಆರೋಪಿಗಳು ಕಾಡಿನಲ್ಲಿಯೇ ಅರ್ಚನಾವನ್ನು ಅವರನ್ನು ಅರೆಬೆತ್ತಲು ಮಾಡಿ, ಜೀವಂತವಾಗಿ ಹೂತು ಹಾಕಿ ಎಸ್ಕೇಪ್ ಆಗಿರ್ತಾರೆ. ಆದರೆ ಅರ್ಚನಾ ಸತ್ತಿರೋದಿಲ್ಲ.
ಇದನ್ನು ಓದಿ: ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು!
ಅರ್ಚನಾ ಅವರಿಗೆ ಯೋಗ ನೆರವಿಗೇ ಬರೋದೇ ಇಲ್ಲಿ. ಜೀವಂತವಾಗಿ ಸಮಾಧಿಯಾಗಿದ್ದ ಅರ್ಚನಾ ಆರೋಪಿಗಳು ಹೋದ್ರೋ ಆ ಸಮಾಧಿಯಿಂದ ಎದ್ದುಬಂದು ಜೀವ ಉಳಿಸಿಕೊಂಡಿದ್ದಾರೆ. 3 ಕಿಲೋ ಮೀಟರ್ ನಡೆದುಕೊಂಡೇ ಬಂದಿದ್ದಾಳೆ. ಮುಂಜಾನೆ 5:30ರ ವೇಳೆ ಒಂಟಿ ಮನೆಗೆ ಬಂದು ಆಶ್ರಯ ಪಡೆದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ದಿಬ್ಬೂರಹಳ್ಳಿ ಪೊಲೀಸ್ರು ಆರೋಪಿಗಳ ಹೆಡೆಮುರಿ ಕೊಟ್ಟಿದ್ದಾರೆ. ಗಂಡನ ಮೇಲೆ ಅನುಮಾನ ಪಟ್ಟು ಸುಪಾರಿ ಕೊಟ್ಟಿದ್ದ ಹಂತಕಿಯೂ ಪೋಲೀಸರ ಅತಿಥಿಯಾಗಿದ್ದಾಳೆ. ಸತೀಶ್, ಮತ್ತವನ ಗೆಳೆಯರಾದ ರಮಣ, ನಾಗೇಂದ್ರ ಆಂಧ್ರಪ್ರದೇಶದವರಾದರೆ, ಇನ್ನೊಬ್ಬ ಆರೋಪಿ ರವಿಚಂದ್ರ ರಾಯಚೂರಿನವನು. ಆರೋಪಿಗಳಲ್ಲಿ ಒಬ್ಬ ಬಾಲಕನೂ ಇದ್ದಾನೆ.