ವೆಸ್ಟ್ ಇಂಡೀಸ್ ಸ್ಟಾರ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಮುಂದಿನ ಎರಡು ಪಂದ್ಯಗಳಿಂದ ನಿಷೇಧಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ನಾಯಕನೊಂದಿಗೆ ಜಗಳವಾಡಿದ್ದ ಅಲ್ಜಾರಿ ಜೋಸೆಫ್, ಅರ್ಧದಲ್ಲೇ ಪಂದ್ಯ ಬಿಟ್ಟು ಹೋಗಿದ್ದರು. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಲ್ಜಾರಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಜೋಸೆಫ್ ಈ ಘಟನೆ ನಡೆಯಿತು. ಫೀಲ್ಡಿಂಗ್ ವಿಚಾರವಾಗಿ ನಾಯಕ ಶಾಯ್ ಹೋಪ್ರೊಂದಿಗೆ ಜಗಳವಾಡಿದ ಅಲ್ಜಾರಿ ಅರ್ಧದಲ್ಲಿಯೇ ಪಂದ್ಯ ಬಿಟ್ಟು ಹೋಗಿದ್ದರು. ಅಲ್ಜಾರಿ ಜೋಸೆಫ್ ಬೌಲಿಂಗ್ ಮಾಡುವಾಗ, ನಾಯಕ ಶಾಯ್ ಹೋಪ್ ಅವರು ಜೋಸೆಫ್ ಇಚ್ಛೆಯಂತೆ ಫೀಲ್ಡಿಂಗ್ಗೆ ಅವಕಾಶ ಮಾಡಿಕೊಡಲಿಲ್ಲ. ಇದರಿಂದಾಗಿ ಜೋಸೆಫ್ ಕೋಪಗೊಂಡರು. ನಾಯಕನಿಗೆ ಮೈದಾನದಲ್ಲೇ ಬೈದ ಅವರು ನಂತರ ತನ್ನ ಓವರ್ ಮುಗಿಸಿ ಮೈದಾನದಿಂದ ಡಗೌಟ್ಗೆ ಹೋಗಿ ಕುಳಿತುಕೊಂಡರು. ಬಳಿಕ ಒಂದು ಓವರ್ ನಂತರ ಮತ್ತೆ ಮೈದಾನಕ್ಕೆ ಬಂದರು.
ಇದನ್ನು ಓದಿ: ನಂದಮೂರಿ ಬಾಲಕೃಷ್ಣ ಟಾಕ್ ಶೋನಲ್ಲಿ ಬರ್ತಿದ್ದಾರೆ ಐಕಾನಿಕ್ ಸ್ಟಾರ್!
ಈ ಕುರಿತು ಪ್ರತಿಕ್ರಿಯಿಸಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ, “ಅಲ್ಜಾರಿ ಅವರ ವರ್ತನೆ ಕ್ರಿಕೆಟ್ಗೆ ವಿರುದ್ಧವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಮತ್ತು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ. ಇದಾದ ಬಳಿಕ ಅಲ್ಜಾರಿ ಜೋಸೆಫ್ ಕ್ಷಮೆ ಯಾಚಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ಉಲ್ಲೇಖಿಸಿ ಅವರು, “ನನ್ನಿಂದ ತಪ್ಪಾಗಿದೆ. ನಾನು ವೈಯಕ್ತಿಕವಾಗಿ ನಾಯಕ ಶಾಯ್ ಹೋಪ್, ಸಹ ಆಟಗಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ವೆಸ್ಟ್ ಇಂಡೀಸ್ ಅಭಿಮಾನಿಗಳಲ್ಲೂ ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.