ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಮಕಾಡೆ ಮಲಗಿದ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ತವರಿನಲ್ಲಾದ ಈ ಮುಖಭಂಗದಿಂದ ಟೀಮ್ ಇಂಡಿಯಾ ಸರಣಿ ಸೋಲುಂಡಿರೋದು ಮಾತ್ರವಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಎಂಟ್ರಿಯ ದಾರಿಗೂ ತಾನೇ ಮುಳ್ಳು ಹಾಕಿಕೊಂಡಿದೆ. ಸ್ವಲ್ಪ ಯಾಮಾರಿದ್ರೂ, ಟೆಸ್ಟ್ ಮೆಸ್ ಗೆಲ್ಲೋ ಕನಸು ನುಚ್ಚುನೂರಾಗಲಿದೆ. WTC ಫೈನಲ್ ಪ್ರವೇಶಕ್ಕೆ ಟೀಮ್ ಇಂಡಿಯಾ ಮುಂದಿರೋ ದಾರಿ ಏನು?. ನ್ಯೂಜಿಲೆಂಡ್ ಎದುರಿನ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಹೀನಾಯ ಮುಖಭಂಗ ಅನುಭವಿಸಿದೆ. ಪುಣೆ ಪಿಚ್ನಲ್ಲಿ ಕಿವೀಸ್ ಖೆಡ್ಡಾಗೆ ಬಿದ್ದ ಟೀಮ್ ಇಂಡಿಯಾ 117 ರನ್ಗಳ ಸೋಲಿಗೆ ಶರಣಾಗಿತ್ತು. ಗೆದ್ದ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಮೊದಲ ಟೆಸ್ಟ್ ಸರಣಿ ಜಯಿಸಿದ ಇತಿಹಾಸ ರಚಿಸಿದ್ರೆ, ಭಾರತದ 12 ವರ್ಷಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು. ಇಷ್ಟೇ ಅಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಎಂಟ್ರಿಯ ದಾರಿ ದುರ್ಗಮವಾಗಿದೆ.
ಸರಣಿ ಸೋಲು, ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ.!
ನ್ಯೂಜಿಲೆಂಡ್ ಎದುರು ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳ ಸೋಲು ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಯನ್ನ ದುರ್ಗಮಗೊಳಿಸಿದೆ. ಬೆಂಗಳೂರು ಹಾಗೂ ಪುಣೆ ಟೆಸ್ಟ್ ಪಂದ್ಯಗಳ ಮುಖಭಂಗದ ಬೆನ್ನಲ್ಲೇ WTC ಅಂಕಪಟ್ಟಿಯಲ್ಲಿ ರೋಹಿತ್ ಪಡೆಯ ಗೆಲುವಿನ ಸರಾಸರಿ ಕುಸಿದಿದೆ. ಪುಣೆ ಟೆಸ್ಟ್ಗೂ ಮುನ್ನ 68.06ರಷ್ಟಿದ್ದ ವಿನ್ನಿಂಗ್ ಪರ್ಸಂಟೇಜ್ ಇದೀಗ 62.82ಕ್ಕೆ ಕುಸಿದಿದೆ. ಈಗಲೂ ಟೀಮ್ ಇಂಡಿಯಾನೇ ಟೇಬಲ್ ಟಾಪರ್. ಆದ್ರೆ, ಇದೀಗ ಉಳಿದ ತಂಡಗಳಿಗೂ ಅವಕಾಶದ ಬಾಗಿಲು ತೆರೆದಿದೆ.
ಇದನ್ನು ಓದಿ: ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ಬಿಗ್ ವಾರ್!
WTC ಪಾಯಿಂಟ್ಸ್ ಟೇಬಲ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೀಸನಲ್ಲಿ 8 ಟೆಸ್ಟ್ ಗೆದ್ದಿರುವ ಟೀಮ್ ಇಂಡಿಯಾ 4ರಲ್ಲಿ ಸೋಲುಂಡಿದ್ದು, ಒಂದು ಪಂದ್ಯ ಡ್ರಾ ಸಾಧಿಸಿ 62.82ರ ಗೆಲುವಿನ ಸರಾಸರಿ ಹೊಂದಿದೆ. ಆಸ್ಟ್ರೇಲಿಯಾ ತಂಡ 8 ಟೆಸ್ಟ್ ಗೆದ್ದು, 3ರಲ್ಲಿ ಸೋತು 1 ಡ್ರಾ ಸಾಧಿಸಿದ್ದು, 62.50ರ ವಿನ್ನಿಂಗ್ ಪರ್ಸಂಟೇಜ್ ಹೊಂದಿದೆ. ಶ್ರೀಲಂಕಾ 5 ಟೆಸ್ಟ್ ಗೆದ್ದು, 4ರಲ್ಲಿ ಸೋತು 55.56ರ ಗೆಲುವಿನ ಸರಾಸರಿ ಹೊಂದಿದ್ರೆ, 5 ಗೆದ್ದು, 5ರಲ್ಲಿ ಸೋತಿರೋ ನ್ಯೂಜಿಲೆಂಡ್ 50.00ರ ಗೆಲುವಿನ ಸರಾಸರಿ ಹೊಂದಿದೆ. ಸೌತ್ ಆಫ್ರಿಕಾ 3 ಟೆಸ್ಟ್ ಗೆದ್ದು, 3ರಲ್ಲಿ ಸೋತಿದ್ದು 1 ಡ್ರಾ ಸಾಧಿಸಿ 47.62ರ ವಿನ್ನಿಂಗ್ ಪರ್ಸೆಂಟೇಜ್ ಹೊಂದಿದೆ. ಈ ಎಲ್ಲಾ ತಂಡಗಳಿಗೆ ಫೈನಲ್ ಪ್ರವೇಶದ ಅವಕಾಶವಿದೆ.
ಆಸಿಸ್ ಟೂರ್ಗೂ ಮುನ್ನ ಟೀಮ್ ಇಂಡಿಯಾಗೆ ಒತ್ತಡ.!
ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಎಂಟ್ರಿಗೆ ಟೀಮ್ ಇಂಡಿಯಾ 8 ಟೆಸ್ಟ್ಗಳ ಪೈಕಿ 4ರಲ್ಲಿ ಗೆಲುವು, 2ರಲ್ಲಿ ಡ್ರಾ ಸಾಧಿಸಬೇಕಿತ್ತು. ಇದೀಗ ಕಿವೀಸ್ ವಿರುದ್ಧದ ಮೊದಲ 2 ಟೆಸ್ಟ್ ಸೋಲಿನೊಂದಿಗೆ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದೆ. ಉಳಿದ 6 ಟೆಸ್ಟ್ಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿಲೇ ಬೇಕಾದ ಬಿಗ್ ಟಾಸ್ಕ್ ಎದುರಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮುಂದಿನ ಟೆಸ್ಟ್ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ ಆಡಲಿದೆ. ಇಲ್ಲಿ ಗೆಲ್ಲೋದೆ ರೋಹಿತ್ ಪಡೆಯ ಮುಂದಿರೋ ಬಿಗ್ ಸವಾಲಾಗಿದೆ. ಕಿವೀಸ್ ವಿರುದ್ಧದ 3ನೇ ಟೆಸ್ಟ್ ಗೆದ್ದು, ಆಸಿಸ್ ಪ್ರವಾಸದಲ್ಲಿ 3 ಟೆಸ್ಟ್ ಗೆಲ್ಲಬೇಕು. ಯಾವ ಪಂದ್ಯದಲ್ಲೂ ಎಲ್ಲೂ ಸ್ಲೋ ಓವರ್ ರೇಟ್ನ ಫೈನ್ ಬೀಳಬಾರದು. ಹಾಗಾದ್ರೆ ಮಾತ್ರ 64.04ರ ಭಾರತದ ಗೆಲುವಿನ ಸರಾಸರಿಯೊಂದಿಗೆ, ಯಾರ ಮೇಲೂ ಡಿಪೆಂಡ್ ಆಗದೆ ಭಾರತ ತಂಡ ಫೈನಲ್ ಪ್ರವೇಶ ಮಾಡಲಿದೆ.
ಯಾರ ಸ್ಥಾನವೂ ಸೇಫ್ ಇಲ್ಲ.. ಫೈನಲ್ ಪ್ರವೇಶಕ್ಕೆ ಟಫ್ ಫೈಟ್.!
ಟೀಮ್ ಇಂಡಿಯಾ ಮಾತ್ರವಲ್ಲ.. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದಾರಿಯಲ್ಲಿ ಯಾರ ಸ್ಥಾನ ಸೇಫ್ ಆಗಿಲ್ಲ. 2ನೇ ಸ್ಥಾನದಲ್ಲಿರೋ ಆಸ್ಟ್ರೇಲಿಯಾ, ಟೀಮ್ ಇಂಡಿಯಾ ವಿರುದ್ಧದ ಸೋತ್ರೆ ಕುಸಿತ ಕಾಣಲಿದೆ. ಒಂದು ವೇಳೆ ಆಸಿಸ್ ಗೆದ್ರೆ, ಭಾರತ ಅಗ್ರಸ್ಥಾನದಿಂದ ಇಳಿಯಲಿದೆ. ಸದ್ಯ 3ನೇ ಸ್ಥಾನದಲ್ಲಿರೋ ಶ್ರೀಲಂಕಾ, ನ್ಯೂಜಿಲೆಂಡ್ ಅವಕಾಶದ ಬಾಗಿಲು ತೆರೆದಿದೆ. 5ನೇ ಸ್ಥಾನದಲ್ಲಿರೋ ಸೌತ್ ಆಫ್ರಿಕಾ ಬಿಗ್ ಅಡ್ವಾಂಟೇಜ್ ಇದೆ.
ಇದನ್ನು ಓದಿ: ಸಮಂತಾ ನೆನಪನ್ನು ಅಳಿಸಿ ಹಾಕಿದ ನಾಗ ಚೈತನ್ಯ!
ಕಿವೀಸ್ ಎದುರಿನ ಟೆಸ್ಟ್ ಸರಣಿ ಸೋಲು ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ. ಬೆಂಗಳೂರು, ಪುಣೆ ಟೆಸ್ಟ್ನಲ್ಲಿ ಸೋತಿರೋ ಟೀಮ್ ಇಂಡಿಯಾ, ಮುಂಬೈನಲ್ಲಾದ್ರೂ ಗೆಲ್ಲಲೇಬೇಕಿದೆ. ಅಲ್ಲೂ ಸೋತ್ರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶದ ಕನಸು ನುಚ್ಚು ನೂರಾಗಲಿದೆ.
ಏಕೆಂದರೆ, ಹೋಮ್ ಅಟ್ವಾಂಟೇಜ್ ಇದ್ದಾಗಲೇ ಸೋತರೆ, ಕಾಂಗರೂ ನಾಡಿನ ಪೇಸ್ & ಬೌನ್ಸಿ ಟ್ರ್ಯಾಕ್ಗಳಲ್ಲಿ ಟೀಮ್ ಇಂಡಿಯಾ ಗೆಲ್ಲೋದು ಟಫ್ ಟಾಸ್ಕ್ ಆಗಲಿದೆ. ಸರಣಿ ಸೋತು ಸಂಕಷ್ಟಕ್ಕೆ ಸಿಲುಕಿರೋ ಟೀಮ್ ಇಂಡಿಯಾ, ಮುಂದೆ ಕಲ್ಲು-ಮುಳ್ಳಿನ ಹಾದಿಯಲ್ಲಿ ಹೇಗೆ ಸಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.