ಕಾಲಿವುಡ್ ನಟ ಸೂರ್ಯ ಅಭಿನಯದ ಕಂಗುವ ಸಿನಿಮಾ ಸಂಪಾದಕ ನಿಶಾದ್ ಯೂಸುಫ್ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಬುಧವಾರ ಕೊಚ್ಚಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಯೂಸುಫ್ ಅವರಿಗೆ 43 ವರ್ಷ ವಯಸ್ಸಾಗಿತ್ತು. ಆದರೆ ಯೂಸುಫ್ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ವರದಿಯಾಗಿದೆ.
ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಯುಸೂಫ್ ಅವರ ಸಾವಿನ ಸುದ್ದಿಯನ್ನು ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಕೇರಳ (ಫೆಫ್ಕಾ) ನಿರ್ದೇಶಕರ ಒಕ್ಕೂಟ ಬುಧವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಖಚಿತಪಡಿಸಿದೆ. ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಸೂರ್ಯ, ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಜೊತೆಗೂಡಿದ ಕೆಲವೇ ದಿನಗಳಲ್ಲಿ ನಿಶಾದ್ ಸಾವಿನ ಸುದ್ದಿ ಬಂದಿದೆ.
ಅವರ ಬಹು ನಿರೀಕ್ಷಿತ ಚಿತ್ರ ಕಂಗುವ ಎರಡು ವಾರಗಳಲ್ಲಿ ಅಂದರೆ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ವಾರಾಂತ್ಯದಲ್ಲಿ ಚೆನ್ನೈನಲ್ಲಿ ಆಯೋಜಿಸಲಾದ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಯುಸೂಪಫ್ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.