ಈ ನಡುವೆ ‘ಪುಷ್ಪ 2’ ಸಿನಿಮಾದ ನಿರ್ಮಾಪಕರೊಬ್ಬರು ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ನಡುವಿನ ಮುನಿಸಿನ ಬಗ್ಗೆ ಮಾತನಾಡಿದ್ದಾರೆ. ‘ಚುನಾವಣೆ ಸಮಯದಲ್ಲಿ ಕೆಲವು ಸಣ್ಣ ಪುಟ್ಟ ಘಟನೆಗಳು ನಡೆದಿದ್ದವು. ಆದರೆ ಅದೆಲ್ಲವೂ ನಡೆದು ಹೋದ ಸಂಗತಿಗಳು, ಈಗ ಅವಕ್ಕೆ ಪ್ರಾಮುಖ್ಯತೆ ಇಲ್ಲ. ಅವರೆಲ್ಲರೂ ಆರಾಮಾವಾಗಿದ್ದಾರೆ. ಅಭಿಮಾನಿಗಳು ಸಹ ಈ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ಳಬಾರದು’ ಎಂದಿದ್ದಾರೆ ಮೈತ್ರಿ ನಿರ್ಮಾಣ ಸಂಸ್ಥೆಯ ಸಹ ನಿರ್ಮಾಪಕ ನವೀನ್ ಯೆರಿನೇನಿ.
ಇದನ್ನು ಓದಿ: ದೀಪಾವಳಿಗೆ 7,000 ವಿಶೇಷ ರೈಲು, ಕೇಂದ್ರದಿಂದ ಬಿಗ್ ಗಿಫ್ಟ್..!
‘ಅಲ್ಲು ಅರ್ಜುನ್ ಈ ಹಿಂದೆಯೂ ಸಹ ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಂದ್ಯಾಲ್ ಕ್ಷೇತ್ರದಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸಲು ಅವರು ಹೋಗಿರಲಿಲ್ಲ ಬದಲಿಗೆ ತಮ್ಮ ಗೆಳೆಯನಿಗೆ ಬೆಂಬಲ ನೀಡಲಷ್ಟೆ ಅವರು ಹೋಗಿದ್ದರು’ ಎಂದು ಮೈತ್ರಿಯ ಮತ್ತೊಬ್ಬ ನಿರ್ಮಾಪಕ ರವಿ ಯಲಮಚಿಲ್ಲಿ ಹೇಳಿದ್ದಾರೆ.
‘ನಾವು ಈ ಹಿಂದೆ ‘ಕಲ್ಕಿ 2898 ಎಡಿ’ ಸಿನಿಮಾದ ಟಿಕೆಟ್ ದರ ಹೆಚ್ಚಳ, ಫ್ಯಾನ್ಸ್ ಶೋ ಇನ್ನಿತರೆಗಳಿಗೆ ಅನುಮತಿ ಕೇಳುವ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿ ಆಗಿದ್ದೆವು. ಆಗೆಲ್ಲ ಅವರು ಬಹಳ ಆಪ್ತವಾಗಿ ನಡೆದುಕೊಂಡರು, ನಮಗೆ ಸಾಕಷ್ಟು ಬೆಂಬಲ ನೀಡಿದರು. ಒಳ್ಳೆಯ ಸಿನಿಮಾಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಈಗ ‘ಪುಷ್ಪ 2’ ಸಿನಿಮಾಕ್ಕೂ ಸಹ ಅವರು ಬೆಂಬಲ ನೀಡುವ ನಿರೀಕ್ಷೆ ಇದೆ’ ಎಂದಿದ್ದಾರೆ.
ಇದನ್ನು ಓದಿ:ಸಾಲ ತೀರಿಸುವ ಸಲುವಾಗಿ ಚಿತ್ರರಂಗಕ್ಕೆ ಕಾಲಿಟ್ಟೆ: ನಟ ಸೂರ್ಯ!
‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗುತ್ತಿದ್ದು, ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಟಿಕೆಟ್ ದರ ಹೆಚ್ಚಳ ಮಾಡಿಕೊಳ್ಳಲು, ಹೆಚ್ಚುವರಿ ಶೋಗಳನ್ನು ಹಾಕಿಕೊಳ್ಳಲು ಸರ್ಕಾರದ ವಿಶೇಷ ಅನುಮತಿ ಪಡೆಯಬೇಕಿದೆ. ಆಂಧ್ರ ಹಾಗೂ ತೆಲಂಗಾಣ ಎರಡರಲ್ಲೂ ಈ ನಿಯಮ ಜಾರಿಯಲ್ಲಿದೆ. ಅಲ್ಲು ಅರ್ಜುನ್, ಡಿಸಿಎಂ ಪವನ್ ಕಲ್ಯಾಣ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಈ ಭಿನ್ನಾಭಿಪ್ರಾಯದಿಂದಾಗಿ ‘ಪುಷ್ಪ 2’ ಸಿನಿಮಾದ ಟಿಕೆಟ್ ಹೆಚ್ಚಳಕ್ಕೆ ಅನುಮತಿ ಸಿಗದೇ ಹೋಗಬಹುದು ಎಂಬ ಆತಂಕ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿದೆ.