ಈಗಿನ ಕಾಲದಲ್ಲಿ ಮಕ್ಕಳು ಕರ್ನಾಟಕದಲ್ಲೇ ಹುಟ್ಟಿದ್ದರು ಅತಿ ಹೆಚ್ಚಾಗಿ ಮಾತಾಡುವುದು ಆಂಗ್ಲ ಭಾಷೆಯನ್ನು. ಯಾವ ಮಕ್ಕಳ ಬಾಯಲ್ಲೂ ಇಂಗ್ಲಿಷ್ ಹಾಡುಗಳನ್ನೇ ಕೇಳುವಂತ ಈ ಕಾಲದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟನ ಮಗ ಕನ್ನಡದ ಪದ್ಯವನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾನೆ.
ಕನ್ನಡದ ಸ್ಟಾರ್ ನಟಿ ಮೇಘನಾ ಹಾಗೂ ನಟ ಚಿರಂಜೀವಿ ಪುತ್ರ ರಾಯನ್ ರಾಜ್ ಸರ್ಜಾ ಮೊನ್ನೆಯಷ್ಟೇ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಕ್ಟೋಬರ್ 22ರ 2020ರಂದು ಹುಟ್ಟಿರುವ ರಾಯನ್ ಈಗ ಸಖತ್ ಕ್ಯೂಟ್ ಆಗಿದ್ದಾನೆ. ಜೊತೆಗೆ ಬಾರಿ ತರ್ಲೆ ಕೂಡ ಆಗಿದ್ದಾನೆ.
ಇದನ್ನು ಓದಿ:‘ನವಗ್ರಹ’ ರೀ-ರಿಲೀಸ್; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!
ಆದರೆ ಈಗ ಸ್ಟಾರ್ ದಂಪತಿ ಮಗ ರಾಯನ್ ರಾಜ್ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅದರಲ್ಲೂ ಚಿರಂಜೀವಿ ಸರ್ಜಾ ಪುತ್ರನ ಕನ್ನಡ ಭಾಷಾ ಪ್ರೇಮಕ್ಕೆ ಅಭಿಮಾನಿಗಳು ಕೂಡ ಮನಸೋತಿದ್ದಾರೆ. ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಯ ಪುತ್ರ ರಾಯನ್ ಕ್ಯೂಟ್ ಆಗಿ ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದ್ದಾನೆ. ಸ್ಟಾರ್ಟ್ ಎಂದ ಕೂಡಲೇ ರಾಯನ್ ಹಚ್ಚೇವು ಕನ್ನಡದ ದೀಪ.. ಹಚ್ಚೇವು ಕನ್ನಡದ ದೀಪ.. ಕರುನಾಡ ದೀಪ ಸಿರಿನುಡಿಯ ದೀಪ. ಒಲವೆತ್ತಿ ತೋರುವ ದೀಪ. ಹಚ್ಚೇವು ಕನ್ನಡದ ದೀಪ ಅಂತ ಹಾಡಿ ಮುಗಿಸಿದ್ದಾನೆ.
ಇದೇ ವಿಡಿಯೋವನ್ನು ನಟಿ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಎಂಥ ಹೆಮ್ಮೆಯ ಗಳಿಗೆ! ನಿನ್ನೆ ರಾಯನ್ ‘ಹಚ್ಚೇವು ಕನ್ನಡದ ದೀಪ’ ಎಂದು ಹಾಡಿದ. ನಿನಗೆ ಈ ಹಾಡು ಹೇಗೆ ಗೊತ್ತು ಅಂತ ಕೇಳ್ದಾಗ…’ಸ್ಕೂಲಲ್ಲಿ ಹೇಳ್ಕೊಟ್ರು ಅಮ್ಮ’ ಎಂದು ಹೇಳಿದ. ನಾನು ರೆಕಾರ್ಡ್ ಮಾಡಿಕೊಂಡೆ. ಮನೆ ಮಾತ್ರ ಅಲ್ಲ. ನಮ್ಮ ಸುತ್ತ ಇರುವ ವಾತಾವರಣದ ಪ್ರಭಾವ ನಮ್ಮ ಮೇಲಿರುತ್ತೆ. ನಾನೊಬ್ಬ ಕನ್ನಡಿಗಳಾಗಿ ಪ್ರತಿನಿತ್ಯ ನನ್ನ ಭಾಷೆ ಸಂಭ್ರಮಿಸುತ್ತೇನೆ. ಇನ್ನು ಮುಂದೆ ಈ ತಿಂಗಳನ್ನ ‘ನಮ್ಮ ನವೆಂಬರ್’ ಎಂದು ಕರೆಯೋಣ? ಅಂತ ಬರೆದುಕೊಂಡಿದ್ದಾರೆ.