ರಿಲಯನ್ಸ್ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದು. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಗ್ರಾಹಕರಿಗೆ ಅನುಗುಣವಾಗಿ ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ ಮತ್ತು ಕೊಡುಗೆಗಳನ್ನು ನೀಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಆದರೀಗ ಬೆಲೆ ಏರಿಕೆ ಬಿಸಿಯಿಂದಾಗಿ ಜಿಯೋ ಬೆಸ್ಟ್ ಪ್ಲಾನ್ ಹುಡುಕಾಡುವುದು ಚಂದಾದಾರರಿಗೆ ಸಾಹಸವಾಗಿ ಬಿಟ್ಟಿದೆ. ಆದರೆ ಒಂದು ವರ್ಷ ಬೆನಿಫಿಟ್ಸ್ ನೀಡುವ ಬೆಸ್ಟ್ ಪ್ಲಾನ್.
ಸಾಮಾನ್ಯವಾಗಿ ಹೆಚ್ಚಿನವರು ಒಂದು ತಿಂಗಳ ಯೋಜನೆಯನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಿಂಗಳ ರೀಚಾರ್ಜ್ ದೊಡ್ಡ ತಲೆನೋವು ಎಂಬ ಕಾರಣಕ್ಕೆ ಒಂದು ವರ್ಷದ ರೀಚಾರ್ಜ್ ಮೊರೆ ಹೋಗುತ್ತಾರೆ. ಅದರಂತೆಯೇ ವಾರ್ಷಿಕ ರೀಚಾರ್ಜ್ ಮೂಲಕ 365 ದಿನಗಳ ಅನಿಯಮಿತ ಉಚಿತ ಕರೆ, ಟಾಕ್ ಟೈಂ ಆಯ್ಕೆಯನ್ನು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋ ಬಳಕೆದಾರರಿಗೆ 3999 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಮೂಲಕ ಹಲವು ಕೊಡುಗೆಗಳನ್ನು ಪಡೆಯಬಹುದಾಗಿದೆ. ಇದು 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಭಾರತದ ಎಲ್ಲಾ ನೆಟ್ವರ್ಕ್ಗೆ ಅನಿಯಮಿತ ಕರೆ ಒದಗಿಸುತ್ತದೆ. ಕರೆ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಮತ್ತು ಡೇಟಾ ನೀಡುತ್ತದೆ. ಅಂದರೆ ವರ್ಷಕ್ಕೆ 6500 ಎಸ್ಎಮ್ಎಸ್ ಉಚಿತವಾಗಿ ನೀಡುತ್ತದೆ.
ಅಂದಹಾಗೆಯೇ 3999 ರೂಪಾಯಿ ರೀಚಾರ್ಜ್ ಪ್ಲಾನ್ ಒಂದು ವರ್ಷಕ್ಕೆ ಅನುಗುಣವಾಗಿ 912.5ಜಿಬಿ ಹೈ-ಸ್ಪೀಡ್ ಡೇಟಾ ನೀಡುತ್ತದೆ. ಅಂದರೆ ದಿನಕ್ಕೆ ಜಿಯೋ ಬಳಕೆದಾರರು 2.5ಜಿಬಿ ಡೇಟಾ ಪಡೆಯಬಹುದಾಗಿದೆ. ಇದಲ್ಲದೆ, ಹಲವು ಮೌಲ್ಯವರ್ಧಿಕ ಸೇವೆಯನ್ನು ಈ ಪ್ಲಾನ್ ಹೊಂದಿದೆ. ಉಚಿತ ಫ್ಯಾನ್ ಕೋಡ್ ಚಂದಾದಾರಿಕೆ, ಒಟಿಟಿ ಸ್ಟ್ರೀಮಿಂಗ್ಗಾಗಿ ಜಿಯೋ ಸಿನಿಮಾ ನೋಡಬಹುದಾಗಿದೆ. ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ.