ಟ್ರಕ್ ಸ್ಕಿಡ್ ಆಗಿ ಪ್ರಪಾತಕ್ಕೆ ಬಿದ್ದ ಪರಿಣಾಮ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಸೈನಿಕರನ್ನು ಸಾಗಿಸುತ್ತಿದ್ದ ಟ್ರಕ್ ಲೆಪರಾಡ ಜಿಲ್ಲೆಯ ಬಸರಾಗೆ ತೆರಳುತ್ತಿದ್ದ ವೇಳೆ ಸ್ಕಿಡ್ ಆಗಿ ಪ್ರಪಾತಕ್ಕೆ ಉರುಳಿದೆ. ಇದರಿಂದ ಮೂವರು ಯೋಧರು ಹುತಾತ್ಮರಾಗಿದ್ದು ಅನೇಕರಿಗೆ ಗಾಯಗಳಾಗಿವೆ. ಅರುಣಾಚಲ ಪ್ರದೇಶದ ಅಪ್ಪರ್ ಸುಭನ್ಸಿರಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸೇನಾ ಮೂಲಗಳ ಪ್ರಕಾರ, ಹುತಾತ್ಮರಾದ ಮೂವರು ಯೋಧರನ್ನು ಹವಲ್ದಾರ್ ನಖಾತ್ ಸಿಂಗ್, ನಾಯಕ್ ಮುಖೇಶ್ ಕುಮಾರ್, ಗ್ರೆನೇಡಿಯರ್ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಸೇರಿ ಗಾಯಗೊಂಡ ಸೈನಿಕರನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ.
ಘಟನೆಯ ಕುರಿತು ಸೇನೆಯ ಪೂರ್ವ ಕಮಾಂಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಈಸ್ಟೆನ್ ಕಮಾಂಡ್ ಆರ್ಮಿ ಕೇಡರ್ ಮತ್ತು ಎಲ್ಲಾ ಶ್ರೇಣಿಯ ಲೆಫ್ಟಿನೆಂಟಲ್ ಜನರಲ್ ಆರ್ ಸಿ ತಿವಾರಿ, ಬ್ರೇವ್ಹಾರ್ಟ್ಸ ಹವ್ ನಖತ್ ಸಿಂಗ್, ಎನ್ಕೆ ಮುಖೇಶ್ ಕುಮಾರ್, ಮತ್ತು ಜಿಡಿಆರ್ ಆಶಿಶ್ರವರ ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅರುಣಾಚಲ ಪ್ರದೇಶದ ಸಿಎಂ ಪ್ರೇಮ ಖಂಡು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಹುತಾತ್ಮ ಯೋಧರನ್ನು ಗೌರವಪೂರ್ವಕವಾಗಿ ಸ್ಮರಿಸಲಾಗುವುದು, ಈ ದುಖಃವನ್ನು ಭರಿಸುವ ಶಕ್ತಿ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸಿಗಲಿ ಎಂದು ನಾನು ಬುದ್ಧನಲ್ಲಿ ಪ್ರಾರ್ಥನೆ ಮಾಡುತ್ತೆನೆ ಎಂದು ಬರೆದಿದ್ದಾರೆ.