ಭಾರತದಲ್ಲಿ ಇಂದು ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver rates) ಎರಡೂ ಭರ್ಜರಿ ಹೆಚ್ಚಳ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 60 ರೂನಷ್ಟು ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,180 ರೂ ಇದ್ದದ್ದು 7,240 ರೂಗೆ ಏರಿಕೆ ಆಗಿದೆ. ದೆಹಲಿ ಮೊದಲಾದೆಡೆ 7,255 ರೂ ಗರಿಷ್ಠ ಬೆಲೆ ಇದೆ. ಬೆಳ್ಳಿ ಬೆಲೆ ಗ್ರಾಮ್ಗೆ ಬರೋಬ್ಬರಿ 2 ರೂನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಹೆಚ್ಚೂಕಡಿಮೆ ಎರಡೂವರೆ ರೂನಷ್ಟು ಏರಿಕೆಯಾಗಿ 94 ರೂ ಗಡಿ ದಾಟಿದೆ. ಇತರೆಡೆ ಬೆಳ್ಳಿ ಬೆಲೆ 99 ರೂ ಮತ್ತು 105 ರೂ ಇದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಕೆಲವೆಡೆ ಏರಿಕೆ ಆಗಿರುವುದು ಬಿಟ್ಟರೆ ಉಳಿದಂತೆ ಅಷ್ಟು ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 72,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,410 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 18ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,980 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,240 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,980 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 941 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 72,400 ರೂ
ಚೆನ್ನೈ: 72,400 ರೂ
ಮುಂಬೈ: 72,400 ರೂ
ದೆಹಲಿ: 72,550 ರೂ
ಕೋಲ್ಕತಾ: 72,400 ರೂ
ಕೇರಳ: 72,400 ರೂ
ಅಹ್ಮದಾಬಾದ್: 72,450 ರೂ
ಜೈಪುರ್: 72,550 ರೂ
ಲಕ್ನೋ: 72,550 ರೂ
ಭುವನೇಶ್ವರ್: 72,400 ರೂ