ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ್ದರ ಎಫೆಕ್ಟ್ ಎಂಬಂತೆ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್ಗೆ 165 ರೂನಷ್ಟು ಭರ್ಜರಿ ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ 173 ರೂನಷ್ಟು ಕಡಿಮೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಒಂದು ದಿನದಲ್ಲಿ ಚಿನ್ನದ ಬೆಲೆ ಕಂಡ ಅತಿ ಹೆಚ್ಚು ಕುಸಿತಗಳಲ್ಲಿ ಇವತ್ತಿನದ್ದೂ ಒಂದು. ಬೆಲೆ ಕುಸಿತದಲ್ಲಿ ಚಿನ್ನಕ್ಕೆ ಬೆಳ್ಳಿಯೂ ಪೈಪೋಟಿ ನೀಡಿದೆ. ಇಂದು ಬೆಳ್ಳಿ ಬೆಲೆ ಗ್ರಾಮ್ಗೆ 3 ರೂನಷ್ಟು ಇಳಿಕೆ ಕಂಡಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 93 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,560 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 72,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 7ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,560 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,910 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 93 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,560 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 93 ರೂ
ಇದನ್ನು ಓದಿ:ಟಾಸ್ಕ್ ವೇಳೆ ಕಾಲು ಮುರಿದು ಆಸ್ಪತ್ರೆ ಪಾಲಾದ ಗೋಲ್ಡ್ ಸುರೇಶ್!
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 72,000 ರೂ
ಚೆನ್ನೈ: 72,000 ರೂ
ಮುಂಬೈ: 72,000 ರೂ
ದೆಹಲಿ: 72,150 ರೂ
ಕೋಲ್ಕತಾ: 72,000 ರೂ
ಕೇರಳ: 72,000 ರೂ
ಅಹ್ಮದಾಬಾದ್: 72,050 ರೂ
ಜೈಪುರ್: 72,150 ರೂ
ಲಕ್ನೋ: 72,150 ರೂ
ಭುವನೇಶ್ವರ್: 72,000 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,680 ರಿಂಗಿಟ್ (70,290 ರುಪಾಯಿ)
ದುಬೈ: 3,070 ಡಿರಾಮ್ (70,450 ರುಪಾಯಿ)
ಅಮೆರಿಕ: 820 ಡಾಲರ್ (69,120 ರುಪಾಯಿ)
ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,240 ರುಪಾಯಿ)
ಕತಾರ್: 3,080 ಕತಾರಿ ರಿಯಾಲ್ (71,210 ರೂ)
ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,200 ರುಪಾಯಿ)
ಓಮನ್: 324.50 ಒಮಾನಿ ರಿಯಾಲ್ (71,030 ರುಪಾಯಿ)
ಕುವೇತ್: 248.30 ಕುವೇತಿ ದಿನಾರ್ (68,190 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,300 ರೂ
ಚೆನ್ನೈ: 10,200 ರೂ
ಮುಂಬೈ: 9,300 ರೂ
ದೆಹಲಿ: 9,300 ರೂ
ಕೋಲ್ಕತಾ: 9,300 ರೂ
ಕೇರಳ: 10,200 ರೂ
ಅಹ್ಮದಾಬಾದ್: 9,300 ರೂ
ಜೈಪುರ್: 9,300 ರೂ
ಲಕ್ನೋ: 9,300 ರೂ
ಭುವನೇಶ್ವರ್: 10,200 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.