‘ಬಿಗ್ ಬಾಸ್’ ಕನ್ನಡ ಸೀಸನ್ 11ರ ಕೆಲ ಸ್ಪರ್ಧಿಗಳು ಯಾಕೋ ಇನ್ನೂ ಗಂಭೀರವಾಗಿರುವುದನ್ನೂ ಕಲಿತಿಲ್ಲ. ಅದರ ಪ್ರತಿಫಲ ಎಂಬಂತೆ, ಬಿಗ್ ಬಾಸ್ ದೊಡ್ಮನೆಯಲ್ಲಿ ಇಲ್ಲ. ‘ನಿಮ್ಮಗಳ ವರ್ತನೆಯಿಂದ ಬೇಸತ್ತು ನಾನು ಹೋಗುತ್ತಿದ್ದೇನೆ’ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಹಾಗಾಗಿ, ಎಲ್ಲ ಸ್ಫರ್ಧಿಗಳು ಆ ಟೆನ್ಷನ್ ಅಲ್ಲಿ ಇದ್ದರೆ, ಜಗದೀಶ್ ಮಾತ್ರ ಫುಲ್ ಬಿಂದಾಸ್ ಆಗಿದ್ದಾರೆ. ಇದು ಮತ್ತೋರ್ವ ಸ್ವರ್ಧಿ ತ್ರಿವಿಕ್ರಮ್ಗೆ ಬೇಸರವನ್ನು ಉಂಟು ಮಾಡಿದೆ. ಹಾಗಾಗಿ, ಅವರು ಜಗದೀಶ್ ಮೇಲೆ ಗರಂ ಆಗಿದ್ದಾರೆ. ಇತ್ತ ‘ಬಿಗ್ ಬಾಸ್’ ಬಗ್ಗೆಯೇ ತಮಾಷೆ ಮಾಡಿಕೊಂಡು ಜಗದೀಶ್ ಆರಾಮಾಗಿದ್ದಾರೆ. ಇದರ ಎಫೆಕ್ಟ್ ಹೇಗಿರಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.