ಉತ್ತರ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಜಾನಪದ ಹಾಡುಗಳು ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ `ನಾ ಡ್ರೈವರ್’ ಹಾಡು ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲ ಕರ್ನಾಟಕದಾದ್ಯಂತ ಸಕತ್ ಹವಾ ಕ್ರಿಯೇಟ್ ಮಾಡಿತ್ತು. ಈ ಹಾಡಿನ ಜೊತೆಗೆ ಹಾಡು ಹಾಡಿದ ಗಾಯಕ ಮಾಳು ನಿಪನಾಳ ಕೂಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದೀಗ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಕುಡಿದ ಮತ್ತಲ್ಲಿ ಮಾಳು ನಿಪನಾಳ ಗ್ಯಾಂಗ್ ಮಹಿಳೆಯರು ಎನ್ನದೇ ಹಲ್ಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಮಾಳು ನಿಪನಾಳ ಸೇರಿ 10 ಜನರ ಗ್ಯಾಂಗ್ ರ್ಯಾಷ್ ಡ್ರೈವಿಂಗ್ ಮಾಡಿಕೊಂಡು ಹೋಗಿದ್ದಾರೆ. ಆಗ ಹಲ್ಲೆಗೊಳಗಾದ ಮೂವರು, ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ:BBK 11: ಮೋಕ್ಷಿತಾ- ತ್ರಿವಿಕ್ರಂ ಮಧ್ಯೆ ಮತ್ತೆ ಬಿಗ್ ಫೈಟ್!
ಇನ್ನು ಬೈಕ್ ಮುಂದುಗಡೆ ಕಾರ್ ಅಡ್ಡಗಟ್ಟಿ ನಿಲ್ಲಿಸಿದ ಗಾಯಕ ನಾನು ಕಾರ್ ಹೀಗೆ ಚಲಾಸ್ತಿನಿ ಅದನ್ನೆಲ್ಲಾ ಕೇಳೋಕೆ ನಿವ್ಯಾರು ಎಂದು ಜಗಳ ಶುರು ಮಾಡಿದ್ದನು. ಮತ್ತು ಶೇಖರ್ ಮತ್ತು ಆತನ ಅಕ್ಕನ ಮೇಲೆ ಮಾಳು ನಿಪನಾಳ ಹಾಗೂ ಸಂಗಂಡಿಗರು ಹಲ್ಲೆ ಮಾಡಿದರು ಎಂದು. ನನ್ನ ತಲೆ ಮತ್ತು ಎದೆ ಭಾಗಕ್ಕೆ ಹೊಡೆದರು ಮತ್ತು ಅಕ್ಕನ ಮೈಮೇಲಿನ ಒಡವೆಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು. ಹಲ್ಲೆಗೆ ಒಳಗಾದ ಶೇಖರ್ ಹಕ್ಯಾಗೋಳ ಚಿಕ್ಕೊಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಳಿ ಈ ಘಟನೆ ನಡೆದಿದೆ. ಶೇಖರ ಹಕ್ಯಾಗೋಳ, ಅಶ್ವಿನಿ ಈರಿಗಾರ, ರೂಪಾ ಹಕ್ಯಾಗೋಳ ಎಂಬುವವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಈ ಬಗ್ಗೆ ರಾಯಬಾಗ ಪೋಲಿಸ್ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.