ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಇಂದಿನಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದರ ನಡುವೆ ಸಿಲಿಕಾನ್ ಸಿಟಿಯಲ್ಲಿ ಬಿಟ್ಟು ಬಿಡದೇ ಮಳೆ ಮಳೆ ಸುರಿಯುತ್ತಿದೆ. ಹೀಗಿದ್ದರೂ ಕೂಡ ಕ್ರಿಕ್ರೆಟ್ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಮ್ಯಾಚ್ ನೋಡಲು ಮಳೆಯ ನಡುವೆಯೂ ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಮುಖ ಮಾಡುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಹುಚ್ಚು ಅಭಿಮಾನಿಯೊಬ್ಬ ವಿರಾಟ್ ಅನ್ನು ನೋಡುವುದಕ್ಕಾಗಿ ಲಕ್ನೋದಿಂದ ಸೈಕಲ್ ನಲ್ಲಿ ಬರೋಬ್ಬರಿ 35 ದಿನ ದಿನಗಳಿಂದ ಸೈಕಲ್ ಏರಿ ಚಿನ್ನಸ್ವಾಮಿ ಸ್ಟೆಡಿಯಂ ತಲುಪಿದ್ದಾನೆ. ಎಷ್ಟೇ ಮಳೆ ಬರಲಿ ಚಳಿ ಇರಲಿ ವಿರಾಟ್ ಕೊಹ್ಲಿಯನ್ನು ನೋಡಿಯೇ ವಾಪಸ್ಸು ಹೋಗುವುದಾಗಿ ಹಠ ಹಿಡಿದು ವಿರಾಟ್ ಗಾಗಿ ಸ್ಟೆಡಿಯಂನಲೇ ಉಳಿದು ಬಿಟ್ಟಿದ್ದಾನೆ. ಇಷ್ಟೆಲ್ಲಾ ಸಹಾಸ ಮಾಡಿ ಬಂದಿರುವ ಆ ಭೂಪನಿಗೆ ವಿರಾಟ್ ದರ್ಶನ ವಾಗಲಿ ಅಭಿಮಾನಿ ಆಸೆ ಈಡೇರಲಿ ಇಂದು ಹಾರೈಸೋಣ.