ಮಲಯಾಳಂ ಇಂಡಸ್ಟ್ರಿಯಲ್ಲಿನ ಹೇಮಾ ಕಮಿಟಿ ಮಾದರಿಯಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗ್ಬೇಕು ಎಂಬ ಮಾತು ಕೇಳಿ ಬರ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಚೈತ್ರಾ ಅಚಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳೊಕೆ ಆಗಲ್ಲ ಎಂದು ಹೇಳಿದ್ದಾರೆ.
ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳಲು ಆಗಲ್ಲ. ಶೋಷಣೆ ಇಲ್ಲ ಅಂತ ಹೇಳೋದು ಪ್ರಪಂಚದಲ್ಲಿ ಕಳ್ಳತನ ಇಲ್ಲ ಎಂದಂತೆ. ನನಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ. ಅದ್ರೆ ಶೋಷಣೆ ಆಗಿರೋರು ನನ್ನ ಬಳಿ ಹೇಳಿ ಕೊಂಡಿದ್ದಾರೆ. ನನ್ನ ಎರಡನೇ ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ತಮಗಾದ ಅನುಭವ ಹಂಚಿಕೊಂಡಿದ್ದರು ಎಂದು ನಟಿ ಚೈತ್ರಾ ಆಚಾರ್ ಹೇಳಿದ್ರು.
ನಮ್ಮ ಜೊತೆ ಟ್ರಿಪ್ಗೆ ಬನ್ನಿ ಹೀರೋಯಿನ್ ಮಾಡ್ತೀವಿ!
ಜೂನಿಯರ್ ಆರ್ಟಿಸ್ಟ್ ಒಬ್ಬರು ಯಾವುದೇ ಸಿನಿಮಾಗಾಗಿ ಆಡಿಷನ್ ಕೊಟ್ಟಿದ್ರಂತೆ. ಮೊದಲ ರೌಂಡ್ ನಲ್ಲಿ ಸೆಲೆಕ್ಟ್ ಆಗಿದ್ದೀರಾ ಅಂತ ಅವ್ರು ಆಕೆಗೆ ಹೇಳಿದ್ರಂತೆ. ಬಳಿಕ ಕಾಲ್ ಮಾಡಿ ನಮ್ಮ ಜೊತೆ ಟ್ರಿಪ್ ಗೆ ಬನ್ನಿ ನಿಮ್ಮನೆ ನಾಯಕಿ ಮಾಡ್ತೀನಿ ಅಂದ್ರಂತೆ ಎಂದು ನಟಿ ಚೈತ್ರಾ ಆಚಾರ್ ಹೇಳಿದ್ದಾರೆ.
ಕಮಿಟಿ ಬಂದ್ರೆ ನಟಿಯರಿಗೆ ಅನುಕೂಲ
ನನಗೆ ಯಾವತ್ತೂ ಈ ರೀತಿ ಅನುಭವ ಆಗಿಲ್ಲ. ಕಮಿಟಿ ಅಂತ ಆದ್ರೆ ಮುಂದೆ ಬರೋ ನಟಿಯರಿಗೆ ಅನುಕೂಲ ಅಗುತ್ತೆ, ಯಾರಿಗೆ ಏನೇ ಸಮಸ್ಯೆ ಆದ್ರೂ ಕಮಿಟಿ ಗಮನಕ್ಕೆ ತರಬಹುದು ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.