ಸಿಎಂ ಸಿದ್ದರಾಮಯ್ಯ ಸರ್ಕಾರ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದೆ. ಆ ಮೂಲಕ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮೂಲಕ ಜನರ ಜೀವ ರಕ್ಷಣೆ ಮಾಡುವ ಕಾರ್ಯಕ್ರಮ ಇದಾಗಿದ್ದು, ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋಲಾರ ಜಿಲ್ಲೆಯಿಂದ ಆರಂಭವಾಗಲಿರುವ ಗೃಹ ಆರೋಗ್ಯ ಯೋಜನೆ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಯೋಜನೆ ಜಾರಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹಾಗಾದ್ರೆ ಯಾವ ಯಾವ ಗೃಹ ಆರೋಗ್ಯ ಯೋಜನೆ, ಹೇಗೆ ಕಾರ್ಯ ನಿರ್ವಹಿಸಲಿದೆ ಎಂದು ನೋಡೊದಾದ್ರೆ.
- ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.
- 2ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.
- ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಬೇರೆ ರೋಗಗಳ ಬಗ್ಗೆ ಪರೀಕ್ಷಿಸಲಾಗುತ್ತದೆ.
- ಅಸಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿಯಿಂದ ಸಲಹೆ ನೀಡಲಾಗುತ್ತದೆ.
- ರೋಗಿಗಳಿಗೆ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆಯನ್ನ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪ ರೇಷ ಸಿದ್ಧಪಡಿಸಲಾಗಿದೆ.
- ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗುತ್ತಿದ್ದು, ಜನವರಿ ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.
ಇದನ್ನು ಓದಿ: ವಾಹನ ಸವಾರರೇ ಇತ್ತ ನೋಡಿ; 2 ದಿನ ಬೆಂಗಳೂರಿನ ಈ ರಸ್ತೆಗಳು ಬಂದ್..!
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗೃಹ ಆರೋಗ್ಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಗೃಹ ಆರೋಗ್ಯ ಯೋಜನೆ ದೀರ್ಘ ಉದ್ದೇಶ ಹೊಂದಿದೆ. ಆರೋಗ್ಯ ಬಗೆಗಿನ ಕಾಳಜಿ ಆದ್ಯತೆ ಅಗತ್ಯ, ಆರೋಗ್ಯಕ್ಕೆ ಬೇಕಾದ ಅಗತ್ಯ ಚಿಕಿತ್ಸೆಗಳನ್ನ ಕೊಡುವುದು ಪ್ರಮುಖ ವಿಚಾರವಾಗಿದೆ. ಜನರ ಆರೋಗ್ಯ ಕಾಪಾಡೋದು ಸರ್ಕಾರದ ಮೂಲಭೂತ ಜವಾಬ್ದಾರಿ ಎಂದರು. ಬಿಪಿಯಿಂದ 25% ಜನ ಸಮ್ಯಸೆ ಅನುಭವಿಸ್ತಾ ಇದ್ದಾರೆ ಎಂದು ಸಮೀಕ್ಷೆ ತಿಳಿಸಿದೆ, 16% ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ, ಹಳ್ಳಿ ಭಾಗದ ಜನ್ರಿಗೆ ಇವುಗಳ ಬಗ್ಗೆ ಅರಿವು ಇರೋದಿಲ್ಲ. ಬಿಪಿ ,ಶುಗರ್ ದೀರ್ಘಕಾಲದ ಪರಿಣಾಮಕ್ಕೆ ಕಾರಣವಾಗಿದೆ. ಹೃದಯಾಘಾತಕ್ಕೆ ,ಪಾಶ್ವವಾಯುವಿಗೆ ಮೂಲಕಾರಣ ಬಿಪಿ ,ಶುಗರ್ ಎಂದರು.
ಆರು ಕೋಟಿ ಜನರಲ್ಲಿ ಮೂರು ಕೋಟಿ ಜನರಿಗೆ ಈ ಯೋಜನೆಯಡಿಯಲ್ಲಿ ತಪಾಸಣೆ ಮಾಡಲಾಗುವುದು. ಈ ಯೋಜನೆಗೆ ಸರ್ಕಾರಕ್ಕೆ ಆರ್ಥಿಕವಾಗಿ ವ್ಯಯ ಆಗಲಿದೆ. ಈ ಯೋಜನೆ ಕೇವಲ ಆರು ತಿಂಗಳ ನಡೆಸಿ ನಂತ್ರ ಕೈಬಿಡಬಾರದು. ಕೋಲಾರ ಜಿಲ್ಲೆಯಿಂದ ಪ್ರಾಯೋಗಿಕ ಆರಂಭವಾಗಲಿದೆ, ಜನವರಿ ವೇಳೆಗೆ ರಾಜ್ಯದೆಲ್ಲಾ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು. ಮನೆಗೆ ಜನ್ರ ಬಳಿ ಔಷದಿ ತಲುಪಿಸುವ ಯೋಜನೆ ಯಶ್ವಸಿ ಕಾಣಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.