ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಮುಖಭಂಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಬಡಿದೆಬ್ಬಿಸಿದಂತಿದೆ. ತವರಿನಲ್ಲಿ ಹೀನಾಯ ಸೋಲು ಕಂಡು, ವೈಟ್ವಾಶ್ ಮುಖಭಂಗ ಅನುಭವಿಸಿದ ಬಳಿಕ ಆಸ್ಟ್ರೇಲಿಯಾದಲ್ಲಾದ್ರೂ ಮಾನ ಉಳಿಸಿಕೊಳ್ಳಲು ಮುಂದಾಗಿದೆ. ಆಟಗಾರರ ಫ್ಲಾಪ್ ಶೋ ನೋಡಿ ನಿರಾಶರಾಗಿರೋ ಬಿಸಿಸಿಐ ಬಾಸ್ಗಳು ಚಿಂತಾಕ್ರಾಂತರಾಗಿದ್ದಾರೆ. ಹೋಮ್ನಲ್ಲೇ ಹೀಗೆ, ಇನ್ನು ಆಸ್ಟ್ರೇಲಿಯಾದಲ್ಲಿ ಏನ್ ಕಥೆ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.
ಕಿವೀಸ್ ವಿರುದ್ಧ ತವರಿನಲ್ಲಿ ಸರಣಿಯ 3 ಟೆಸ್ಟ್ಗಳನ್ನ ಸೋತು ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, ಇದೀಗ ಮುಂದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದೆ. ತವರಿನಲ್ಲೇ ಸೋತು ಸುಣ್ಣವಾದ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದ ಟಫ್ ಕಂಡೀಷನ್ನಲ್ಲಿ ಗೆಲುವು ಸುಲಭದ ಟಾಸ್ಕ್ ಆಗಿ ಉಳಿದಿಲ್ಲ. ಹೀಗಾಗಿ ನವೆಂಬರ್ 22ರಿಂದ ಆರಂಭವಾಗೋ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಗೆಲುವಿನ ಹಳಿಗೆ ಮರಳಲು ಟೀಮ್ ಇಂಡಿಯಾದ ಕಸರತ್ತು ಶುರುವಾಗಿದೆ.
ಇದನ್ನು ಓದಿ: ಬೇಕಿದ್ರೆ ರೂಲ್ಸ್ ಬ್ರೇಕ್ ಮಾಡ್ತೀನಿ…ಗೋಲ್ಡ್ ಸುರೇಶ್ ಸ್ಪೋಟ!
ಎಲ್ಲರಿಗೂ ಮುನ್ನ ಆಸ್ಟ್ರೇಲಿಯಾಗೆ ಹಾರುವಂತೆ ಸೂಚನೆ.!
ನ್ಯೂಜಿಲೆಂಡ್ ಸೋಲಿನ ಬಳಿಕ ಎಚ್ಚೆತ್ತುಕೊಂಡಿರೋ, ಬಿಸಿಸಿಐ ಬಾಸ್ಗಳು ಪ್ರಿಪರೇಶನ್ಗೆ ಹೆಚ್ಚು ಆದ್ಯತೆ ನೀಡಲು ತಿರ್ಮಾನಿಸಿದ್ದಾರೆ. ಕಾಂಗರೂಗಳ ಬೇಟೆಗೆ ಪ್ಲಾನ್ ಬಿ ರೂಪಿಸಿಕೊಂಡಿರುವ ಬಾಸ್ಗಳು, ಬೆಂಗಳೂರು ಟೆಸ್ಟ್ ಬಳಿಕ ತಂಡದಿಂದ ಡ್ರಾಪ್ ಆದ ಕೆ.ಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ದೃವ್ ಜುರೇಲ್ ಹೊಸ ಜವಾಬ್ದಾರಿ ನೀಡಿದ್ದಾರೆ. 3ನೇ ಟೆಸ್ಟ್ ಅಂತ್ಯದ ಬೆನ್ನಲ್ಲೇ ದಿಢೀರ್ ಆಸ್ಟ್ರೇಲಿಯಾಗೆ ಹಾರುವಂತೆ ಸೂಚಿಸಿದ್ದಾರೆ. ಈಗಾಗಲೇ ಕಾಂಗರೂ ನಾಡಲ್ಲಿರೋ ಇಂಡಿಯಾ ಎ ತಂಡಕ್ಕೆ ಇವರಿಬ್ಬರನ್ನ ಸೇರ್ಪಡೆ ಮಾಡಲಾಗಿದೆ.
ಸದ್ಯ ಋತುರಾಜ್ ಗಾಯಕ್ವಾಡ್ ನೇತೃತ್ವದ ಇಂಡಿಯಾ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ ಅನ್ಅಫಿಶಿಯಲ್ ಟೆಸ್ಟ್ ಸರಣಿಯನ್ನಾಡ್ತಿದೆ. ಸರಣಿಯ ಮೊದಲ ಪಂದ್ಯ ಅಂತ್ಯ ಕಂಡಿದ್ದು, 2ನೇ ಪಂದ್ಯ ನವೆಂಬರ್ 7 ರಿಂದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಹುಲ್ ಹಾಗೂ ದೃವ್ ಜುರೇಲ್ಗೆ ಆಡುವಂತೆ ಬಾಸ್ಗಳು ಸೂಚಿಸಿದ್ದಾರೆ. ಆಸಿಸ್ ಕಂಡಿಷನ್ಸ್ಗೆ ಹೊಂದಿಕೊಳ್ಳಲು, ಫಾರ್ಮ್ ಕಂಡುಕೊಳ್ಳಲು ನೆರವಾಗೋ ದೃಷ್ಟಿಯಿಂದ ಬಿಸಿಸಿಐ ಈ ಪ್ಲಾನ್ ರೂಪಿಸಿದೆ.
ಇಂಡಿಯಾ ‘ಎ’ ತಂಡದ ಮೇಲಿದೆ ಸೆಲೆಕ್ಟರ್ ಹದ್ದಿನ ಕಣ್ಣು,!
ಸದ್ಯ ಆಸ್ಟ್ರೇಲಿಯಾದಲ್ಲಿ ಅನ್ ಅಫಿಶಿಯಲ್ ಟೆಸ್ಟ್ ಸರಣಿ ಆಡ್ತಿರೋ ಇಂಡಿಯಾ ಎ ತಂಡದ ಮೇಲೆ ಸೆಲೆಕ್ಟರ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ. ಇಂಡಿಯಾ ಎ ಪರ ಮೊದಲ ಟೆಸ್ಟ್ನಲ್ಲಿ ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ. ಆಸಿಸ್ ಕಂಡಿಷನ್ನಲ್ಲಿ ಇವರಿಬ್ಬರು ಆಡಿದ ಆಟಕ್ಕೆ ಸೆಲೆಕ್ಟರ್ಸ್ ಇಂಪ್ರೆಸ್ ಆಗಿದ್ದಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಎ ಎದುರಿನ ಸರಣಿ ಅಂತ್ಯದ ಬಳಿಕ, ಟೀಮ್ ಇಂಡಿಯಾ ಟೆಸ್ಟ್ ತಂಡದೊಂದಿಗೆ ಇರುವಂತೆ ಸೂಚಿಸಿದ್ದಾರೆ. ಇವರಿಬ್ಬರೇ ಅಲ್ಲ.. ಉಳಿದ ಆಟಗಾರರ ಮೇಲೂ ಹದ್ದಿನ ಕಣ್ಣಿದೆ.
ಇದನ್ನು ಓದಿ: ಪೀಣ್ಯ ಫ್ಲೈಓವರ್ ಟ್ರಾಫಿಕ್ ಸಮಸ್ಯೆಗೆ ಜನವರಿಯಲ್ಲಿ ತೆರೆ ಬೀಳಲಿದೆ!
ಬಿಸಿಸಿಐನ ಸ್ಪೆಷಲ್ ಪ್ಲಾನ್ ಹಿಂದಿದೆ ಕಠಿಣ ನಿರ್ಧಾರ.!
ಇಂಡಿಯಾ ಎ ತಂಡದ ಆಟಗಾರರ ಪರ್ಫಾಮೆನ್ಸ್ ಮೇಲೆ ಸೆಲೆಕ್ಟರ್ಸ್ ಹದ್ದಿನ ಕಣ್ಣಿಟ್ಟಿರೋದ್ರಿಂದ ಹಿಂದೆ ಬಿಸಿಸಿಐ ಬಾಸ್ಗಳ ಕಠಿಣ ಸೂಚನೆಯಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಾವುದೇ ಆಟಗಾರ ಫ್ಲಾಪ್ ಆದ್ರೂ, ಅವರನ್ನ ರಿಪ್ಲೇಸ್ ಮಾಡಿ ಎಂದು ಬಾಸ್ಗಳು ಸೂಚನೆ ನೀಡಿದ್ದಾರೆ. ಸೀನಿಯರ್ ಆಟಗಾರರು ಯಾರೇ ಫ್ಲಾಪ್ ಆದ್ರೂ, ಮುಲಾಜಿಲ್ಲದೇ ಗೇಟ್ಪಾಸ್ ನೀಡಿ ಇಂಡಿಯಾ ಎ ಪರ ಮಿಂಚಿದವರಿಗೆ ಸ್ಥಾನ ನೀಡಲು ಬಿಸಿಸಿಐ ವಲಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಮಾತಿನಂತೆ, ನ್ಯೂಜಿಲೆಂಡ್ ವಿರುದ್ಧದ ಸೋಲು ಬಿಸಿಸಿಐ ಬಾಸ್ಗಳನ್ನ ಬಡಿದೆಬ್ಬಿಸಿದಂತೆ ಕಾಣ್ತಿದೆ. ಕಾಂಗರೂ ನಾಡಿನ ಸಮರಕ್ಕೂ ಮುನ್ನ ಬಿಸಿಸಿಐ ಬಾಸ್ಗಳು ಮಾಡಿರೋ ಈ ಸ್ಪೆಷಲ್ ಪ್ಲಾನ್ ಎಷ್ಟರಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.