ಸ್ಯಾಂಡಲ್ವುಡ್ ನಟ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನನ್ನು ನವೆಂಬರ್ 1ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈಗಾಗಲೇ ವೈದ್ಯರು ನಟನ ಆರೋಗ್ಯದ ಮೇಲೆ ನಿಗಾ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ದರ್ಶನ್ ಅವರ ಆರೋಗ್ಯದ ಕುರಿತು ಪ್ರತಿ ಅಪ್ಡೇಟ್ಸ್ ಹೊರಗೆ ಬರುತ್ತಲೇ ಇದೆ. ಈ ನಿಟ್ಟಿನಲ್ಲಿ ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಜಯಲಕ್ಷ್ಮಿ ಅವರು ದರ್ಶನ್ ಅವರು ಆರೋಗ್ಯದ ಗೌಪ್ಯತೆಯನ್ನು ಕಾಪಾಡುವಂತೆ ಆಸ್ಪತ್ರೆ ವೈದ್ಯರಿಗೆ ಪರ್ಸನಲ್ ಆಗಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ವಿಜಯಲಕ್ಷ್ಮಿ ಅವರು ವೈದ್ಯರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಿಜಿಎಸ್ ಆಸ್ಪತ್ರೆಯ ಮ್ಯಾನೇಜ್ಮೆಂಟ್ ಸಹ ವೈದ್ಯರಿಗೆ ತಾಕೀತು ಮಾಡಿದ್ದು ನಟನ ಹೆಲ್ತ್ ಅಪ್ಡೇಟ್ ನೀಡದಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳಿಗೆ ಅಥವಾ ಇತರೆ ಸಂಬಂಧಿಗಳಿಗೆ ಮಾಹಿತಿ ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ತಪ್ಪು ಮಾಡಿದ ಬಿಗ್ ಬಾಸ್ ಮನೆ ಮಂದಿ; ಚೈತ್ರಾ, ಮಾನಸಾಗೆ ಶಿಕ್ಷೆ!
ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರು ಬೆನ್ನು ನೋವು ಮತ್ತು ಕಾಲು ನೋವು ಹಿನ್ನೆಲೆ ವೈದ್ಯರ ನಿಗಾದಲ್ಲಿದ್ದಾರೆ. ಈಗಾಗಲೇ ಹಲವು ಪರೀಕ್ಷೆಗಳನ್ನ ಮಾಡಿರುವ ವೈದ್ಯರು ಮುಂದಿನ ಟ್ರೀಟ್ಮೆಂಟ್ ಬಗ್ಗೆ ಚರ್ಚಿಸಲಿದ್ದಾರೆ.ಕೆಲವು ವರದಿಗಳು ವೈದ್ಯರ ಕೈ ಸೇರಿವೆ. ಮತ್ತಷ್ಟು ವರದಿಗಳು ವೈದ್ಯರ ಕೈ ಸೇರಬೇಕಿದೆ. ಈ ಹಿನ್ನೆಲೆ 48 ಗಂಟೆಗಳ ನಂತರ ವರದಿ ಸಿಗಲಿದೆ ಎಂದು ಹೇಳಲಾಗುತ್ತಿದೆ.