ಡೊನಾಲ್ಡ್ ಟ್ರಂಪ್, ಅಮೆರಿಕ ಫಸ್ಟ್ ಎನ್ನುವ ಮಂತ್ರ ಘೋಷಿಸಿಯೇ ಗೆದ್ದಿದ್ದಾರೆ. ಅಂತಹ ಅಮೆರಿಕದ ಭದ್ರತಾ ಸಲಹೆಗಾರರಾಗಿ ಭಾರತೀಯ ಮೂಲದವರು ನೇಮಕವಾಗ್ತಾರಾ? ಅಂಥಾದ್ದೊಂದು ಕುತೂಹಲ ಹುಟ್ಟಿಸಿರೋದು ರಿಪಬ್ಲಿಕನ್ ಪಾರ್ಟಿಯಿಂದ ಗೆದ್ದಿರುವ 7 ಭಾರತೀಯರು. 7 ಮಂದಿ ಭಾರತೀಯ ಮೂಲದವರಲ್ಲಿ ಖ್ಯಾತನಾಮರೇ ತುಂಬಿದ್ದಾರೆ. ಅಂತಹವರಲ್ಲಿ ಒಬ್ಬರು ಕಾಶ್ ಪಟೇಲ್ ಅಲಿಯಾಸ್ ಕಶ್ಯಪ್ ಪಟೇಲ್. ಈ ಕಶ್ಯಪ್ ಪಟೇಲ್ ಭಾರತೀಯ ಮೂಲದವರೇನೋ ಹೌದಾದರೂ, ರಕ್ಷಣಾ ಮತ್ತು ಗುಪ್ತಚರ ವಿಭಾಗದಲ್ಲಿ ವ್ಯಾಪಕ ಅನುಭವ ಹೊಂದಿರುವ ವ್ಯಕ್ತಿ. ಎಕ್ಸ್ ರಿಪಬ್ಲಿಕನ್ ಹೌಸ್ ಸಿಬ್ಬಂದಿಯಾಗಿದ್ದವರು. ಕಾಶ್ ಪಟೇಲ್ ಎಂದೇ ಫೇಮಸ್ ಆಗಿರುವ ಕಶ್ಯಪ್ ಮೂಲ ಗುಜರಾತ್. ಆದರೆ ಕಶ್ಯಪ್ ಪಟೇಲ್ ಅವರ ತಂದೆ ಉಗಾಂಡದಲ್ಲಿಯೇ ಬೆಳೆದವರು. ಈದಿ ಅಮಿನ್ ಆಡಳಿತ ಇದ್ದ ಕಾಲದಲ್ಲಿ ಅಮೆರಿಕಕ್ಕೆ ವಲಸೆ ಹೋದರು.
ಇದನ್ನು ಓದಿ:ಸಲ್ಮಾನ್ ನಂತರ ನಟ ಶಾರುಖ್ಗೂ ಜೀವ ಬೆದರಿಕೆ ಕರೆ!
ಆದರೆ ಕಶ್ಯಪ್ ಪಟೇಲ್ ಹುಟ್ಟಿದ್ದು ನ್ಯೂಯಾರ್ಕಿನಲ್ಲೇ. ರಿಚ್ಮಂಡ್ ಯೂನಿವರ್ಸಿಟಿಯಲ್ಲಿ ಓದಿದ ಕಶ್ಯಪ್ ಪಟೇಲ್, ಕಾನೂನು ಪದವೀಧರ. ಬ್ರಿಟನ್ನಿನಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಅಧ್ಯಯನ ಮಾಡಿರುವ ವ್ಯಕ್ತಿ. ಅಮೆರಿಕದ ರಕ್ಷಣಾ ವಿಭಾಗದಲ್ಲಿ ಕೆಲಸ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಶ್ಯಪ್, ಅಲ್ ಬಗ್ದಾದಿ, ಖಾಸಿಮ್ ಅಲ್ ರಿಮಿ ಅವರ ಬೇಟೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದವರು. ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಟ್ರಂಪ್ ಅತೀ ಹೆಚ್ಚು ನಂಬುತ್ತಿದ್ದವರಲ್ಲಿ ಕಶ್ಯಪ್ ಪಟೇಲ್ ಕೂಡಾ ಒಬ್ಬರು.
2016ರಲ್ಲಿ ಅಮೆರಿಕ ಚುನಾವಣೆಯಲ್ಲಿ ರಷ್ಯನ್ ಕೈವಾಡವನ್ನು ಪತ್ತೆ ಹಚ್ಚಿದ್ದಷ್ಟೇ ಅಲ್ಲ, ಅಮೆರಿಕವನ್ನು ಅತಿಯಾಗಿ ಕಾಡುತ್ತಿರುವ ಡ್ರಗ್ಸ್, ಮಾನವ ಕಳ್ಳಸಾಗಾಣಿಕೆ, ಹಣಕಾಸು ಅವ್ಯವಹಾರಗಳ ಮೂಲವನ್ನು ಭೇದಿಸಿದ ಪ್ರಮುಖ ವ್ಯಕ್ತಿ. ಟ್ರಂಪ್ಗಾಗಿ ಏನನ್ನೂ ಮಾಡುವುದಕ್ಕೆ ಸಿದ್ಧನಿರುವ ವ್ಯಕ್ತಿ ಎಂದೇ ರಿಪಬ್ಲಿಕನ್ ಪಕ್ಷದಲ್ಲಿ ಕರೆಸಿಕೊಂಡಿರುವ ಕಶ್ಯಪ್ ಪಟೇಲ್ ಅವರನ್ನು ಟ್ರಂಪ್ ಅವರ ಜೇಮ್ಸ್ ಬಾಂಡ್ ಎಂದೇ ಕರೆಯುತ್ತಾರೆ. ಕಳೆದಬಾರಿ ಅಧ್ಯಕ್ಷರಾಗಿದ್ದ ಕೊನೆ ಅವಧಿಯಲ್ಲಿ ಟ್ರಂಪ್ , ಕಶ್ಯಪ್ ಅವರನ್ನು ಸಿಐಎ ಡೈರೆಕ್ಟರ್ ಆಗಿ ನೇಮಿಸಲು ಪ್ರಯತ್ನಿಸಿದ್ದರು. ಆದರೆ ಆಗಿರಲಿಲ್ಲ. ಆದರೆ ಈ ಬಾರಿ ಕಶ್ಯಪ್ ಅವರು ಸಿಐಎ ನಿರ್ದೇಶಕರಾಗಿ ನೇಮಕವಾಗಬಹುದು ಎಂಬ ನಿರೀಕ್ಷೆ ಇದೆ. ಕಾಶ್ ಪಟೇಲ್ ನೇಮಕಾತಿಗೆ ಸೆನೆಟ್ ಅನುಮತಿ ಬೇಕಾಗಿದೆ. ಆದರೆ ಈ ಬಾರಿ ಸೆನೆಟ್ನಲ್ಲಿಯೂ ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿ ಪ್ರಬಲವಾಗಿರುವ ಕಾರಣ, ಕಾಶ್ ಪಟೇಲ್/ಕಶ್ಯಪ್ ಪಟೇಲ್ ಸಿಐಎ ನಿರ್ದೇಶಕರಾಗಬಹುದು ಎಂಬ ನಿರೀಕ್ಷೆ ಇದೆ.ಡೊನಾಲ್ಡ್ ಟ್ರಂಪ್ ಅವರ ಈ ಐತಿಹಾಸಿಕ ಗೆಲುವಿನಲ್ಲಿ ಅನಿವಾಸಿ ಭಾರತೀಯ ಲೀಡರ್ಸ್ಗಳ ಪಾತ್ರ ಬಹಳಷ್ಟಿದೆ. ಆದ್ದರಿಂದ ಟ್ರಂಪ್ 2.0 ಸರ್ಕಾರದಲ್ಲಿನ ಹಲವು ಆಯಕಟ್ಟಿನ ಹುದ್ದೆಗಳು ಭಾರತದ ಮೂಲದ ನಾಯಕರ ಪಾಲಾಗಲಿವೆ ಎಂಬ ನಿರೀಕ್ಷೆ ಮೂಡಿದೆ.
ಇದನ್ನು ಓದಿ:ಯುದ್ಧ ಮಾಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!