ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ರಿಷಬ್ ಪಂತ್, ಮೆಗಾ ಹರಾಜಿಗೆ ಹೋಗ್ತಾರೆ ಅನ್ನೋ ಸುದ್ದಿಗೆ ಮತ್ತೆ ಮರು ಜೀವ ಬಂದಿದೆ. ಪಂತ್ರ ಆ ಒಂದು ಫೋಸ್ಟ್ ಇದೀಗ ಹೊಸ ಕಥೆಯನ್ನ ಹೇಳ್ತಿದೆ. ಡೆಲ್ಲಿಗೆ ಪಂತ್ ಗುಡ್ ಬೈ ಹೇಳೋದು ಕನ್ಫರ್ಮಾ.? ಪಂತ್ ಮಾಡಿರೋ ಪೋಸ್ಟ್ ಏನು?.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಸಿದ್ಧತೆ ಜೋರಾಗಿ ನಡೀತಿದೆ. ಈ ತಿಂಗಳ ಅಂತ್ಯದಲ್ಲಿ ರಿಟೈನ್ ಆಟಗಾರರ ಪಟ್ಟಿ ಸಲ್ಲಿಸಬೇಕಿದ್ದು, ಯಾವ ಫ್ರಾಂಚೈಸಿ, ಯಾವ ಆಟಗಾರನ ತಂಡದಲ್ಲಿ ಉಳಿಸಿಕೊಳ್ಳುತ್ತೆ ಅನ್ನೋ ಕ್ಯೂರಿಯಾಸಿಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಬಲಿಷ್ಠ ತಂಡಗಳನ್ನ ಕಟ್ಟೋ ಕೆಲಸದಲ್ಲಿ ಫ್ರಾಂಚೈಸಿಗಳು ಬ್ಯೂಸಿಯಾಗಿದ್ದು, ಇದ್ರ ನಡುವೆ ಸ್ಟಾರ್ ಆಟಗಾರರು ತಂಡ ತೊರೆಯೋ ಶಾಕಿಂಗ್ ಸುದ್ದಿಗಳು ಹೊರ ಬರ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್ಗೆ ಗುಡ್ ಬೈ ಹೇಳ್ತಾರಾ ರಿಷಬ್ ಪಂತ್..?
ಕಳೆದ ಕೆಲ ತಿಂಗಳಿಂದ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತೊರೆಯುತ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ರಿಕಿ ಪಾಂಟಿಂಗ್ ಹೊರ ಬಿದ್ದ ಬಳಿಕವಂತೂ ಈ ಸುದ್ದಿ ಬಹುತೇಕ ಕನ್ಫರ್ಮ್ ಎನ್ನಲಾಗಿತ್ತು. ಆದ್ರೆ, ಇದ್ದಕ್ಕಿದ್ದಂತೆ ಸುದ್ದಿ ಸೈಲೆಂಟ್ ಆಗಿತ್ತು. ಆದ್ರೀಗ ಮತ್ತೆ ಅದೇ ಸುದ್ದಿ ಸಖತ್ ಸೌಂಡ್ ಮಾಡ್ತಿದೆ. ಅದಕ್ಕೆ ಕಾರಣ ಪಂತ್ ಮಿಡ್ ನೈಟ್ ಟ್ವೀಟ್.
ಷಬ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್
ಅಕ್ಟೋಬರ್ 12ರ ಮಧ್ಯರಾತ್ರಿ 12 ಗಂಟೆ, 26 ನಿಮಿಷಕ್ಕೆ ಸರಿಯಾಗಿ ಪಂತ್ ಮಾಡಿರುವ ಟ್ವೀಟ್ ಇದು. ಬೆಳ್ಳಂ ಬೆಳಗ್ಗೆ ಟ್ವಿಟರ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಈ ಟ್ವೀಟ್, ಅಭಿಮಾನಿಗಳನ್ನ ಕನ್ಪ್ಯೂಸ್ ಮಾಡಿದೆ. ಡೆಲ್ಲಿ ಫ್ರಾಂಚೈಸಿಯ ಸ್ಥಿತಿಯಂತೂ ಅಯೋಮಯ ಆಗಿದೆ.
ಡೆಲ್ಲಿ ಮೊದಲ ರಿಟೈನ್ ಆಯ್ಕೆ ಪಂತ್.!
ಪಂತ್ರನ್ನ ಡೆಲ್ಲಿ ಕ್ಯಾಪಿಟಲ್ಸ್ನ ಫಸ್ಟ್ ರಿಟೈನ್ ಚಾಯ್ಸ್ ಅನ್ನೋದ್ರಲ್ಲೇ ಎರಡು ಮಾತಿಲ್ಲ. ಈ ಬಗ್ಗೆ ತಂಡದ ಡೈರೆಕ್ಟರ್ ಸೌರವ್ ಗಂಗೂಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ಬಿಗ್ ಮ್ಯಾಚ್ ವಿನ್ನರ್ ಆಗಿರುವ ಪಂತ್, ಕ್ಯಾಪ್ಟನ್ ಕೂಡ ಹೌದು. ಎಲ್ಲಕ್ಕಿಂತ ಮಿಗಿಲಾಗಿ ಪಂತ್ನ ಕೈಬಿಡಲು ಫ್ರಾಂಚೈಸಿ ಬಳಿ ಕಾರಣಗಳೇ ಇಲ್ಲ. ಇಂಥಾ ಟೈಮ್ನಲ್ಲಿ ರಿಷಭ್ ಪಂತ್ ಮಾಡಿರೋ ಟ್ವೀಟ್, ಗೊಂದಲ ಸೃಷ್ಟಿಸಿದೆ.
ಬೆನ್ನಿಗೆ ನಿಂತಿದ್ದ ಡೆಲ್ಲಿಗೆ ಮೋಸ ಮಾಡ್ತಾರಾ ಪಂತ್..?
ಪಂತ್, ಮೆಗಾ ಹರಾಜಿಗೆ ಹೋದ್ರೆ, ಕೋಟಿ ಲೆಕ್ಕದಲ್ಲಿ ಹಣ ಸಿಗೋದ್ರಲ್ಲಿ ಡೌಟೇ ಇಲ್ಲ. ಆದ್ರೆ, 2016ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಪಂತ್ಗೆ ಬೆನ್ನುಲುಬಾಗಿ ನಿಂತಿದೆ. ಪಂತ್ ವೃತ್ತಿ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದೆ. 2021ರಲ್ಲಿ ಶ್ರೇಯಸ್ ಇಂಜುರಿಗೆ ತುತ್ತಾದ ಸಂದರ್ಭ ಪಂತ್ಗೆ ನಾಯಕತ್ವ ನೀಡಿದ್ದ ಡೆಲ್ಲಿ, ನಂತರದ ವರ್ಷ ಫುಲ್ ಟೈಮ್ ಕ್ಯಾಪ್ಟನ್ಸಿ ನೀಡಿತ್ತು.
ಅಷ್ಟೇ ಅಲ್ಲ.! ಕಾರು ಅಪಘಾತದ ವೇಳೆ ಬೆನ್ನಿಗೆ ನಿಂತಿದ್ದ ಡೆಲ್ಲಿ ಫ್ರಾಂಚೈಸಿ ಪೂರ್ಣ ಪ್ರಮಾಣದ ಹಣ ನೀಡಿತ್ತು. ಹೀಗೆ ಹೆಜ್ಜೆ ಹೆಜ್ಜೆಗೂ ಬೆನ್ನಿಗೆ ನಿಂತಿದ್ದ ತವರಿನ ಫ್ರಾಂಚೈಸಿಯನ್ನೇ ರಿಷಬ್ ತೊರೆಯುತ್ತಾರಾ.? ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ಪಂತ್ ಮಾಡಿರುವ ಒಂದೇ ಒಂದು ಟ್ವೀಟ್, ಎಲ್ಲೆಡೆ ಹಲ್ ಚಲ್ ಎಬ್ಬಿಸಿದೆ. ಮುಂದೆ ಏನಾಗಲಿದೆ ಅನ್ನೋ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.