ಐಪಿಎಲ್ 2025ರ ರಿಟೈನ್, ರಿಲೀಸ್ ಕುರಿತು ಸಾಕಷ್ಟು ಸುದ್ದಿಗಳು ಹೊರ ಬೀಳುತ್ತಿವೆ. ಇದೀಗ ಮತ್ತೊಂದು ಬಿಗ್ ನ್ಯೂಸ್ ಹೊರ ಬಿದ್ದಿದ್ದು ಈ ಸುದ್ದಿ ನಿಜವಾದರೆ ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿ ಹೆನ್ರಿಚ್ ಕ್ಲಾಸೆನ್ ಹೊಸ ಇತಿಹಾಸ ಬರೆಯಲಿದ್ದಾರೆ. ಫ್ರಾಂಚೈಸಿ ಅವರನ್ನು ಭಾರೀ ಹಣ ಕೊಟ್ಟು ತಂಡದಲ್ಲಿ ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನು ನೋಡಿ:ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ!
ವಿರಾಟ್ ಕೊಹ್ಲಿ ತಂಡಕ್ಕೆ ಮೊದಲ ಆಟಗಾರನಾಗಿ ಆರ್ಸಿಬಿ ಫ್ರಾಂಚೈಸಿಯಿಂದ ಆಯ್ಕೆ ಆಗುವುದು ಬಹುತೇಕ ಕನ್ಫರ್ಮ್ ಆಗಿದೆ. ಮೊದಲ ಆಟಗಾರನಾಗಿ ಆಯ್ಕೆ ಮಾಡಿಕೊಂಡರೆ ಕೊಹ್ಲಿಗೆ ಆರ್ಸಿಬಿ ಫ್ರಾಂಚೈಸಿ ಒಟ್ಟು 18 ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ. 2018 ರಿಂದಲೂ ಈ ಹಣ ನೀಡಲಾಗುತ್ತಿದ್ದು ಐಪಿಎಲ್ನಲ್ಲಿ ಕೊಹ್ಲಿ ಮಾತ್ರ ರಿಟೈನ್ ಲಿಸ್ಟ್ನಲ್ಲಿ ಅತಿ ಹೆಚ್ಚು ಹಣ ಪಡೆಯುತ್ತಿರುವ ಸ್ಟಾರ್ ಪ್ಲೇಯರ್ ಆಗಿದ್ದಾರೆ.
ಆದರೆ ಸನ್ ರೈಸರ್ಸ್ ಹೈದ್ರಾಬಾದ್ ಟೀಮ್ ಇದಕ್ಕೆ ಪ್ರತಿಯಾಗಿ ವಿಕೆಟ್ ಕೀಪರ್ ಕಮ್ ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ರನ್ನ ಮೊದಲ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಹೈದ್ರಾಬಾದ್ ತಂಡದ ಓನರ್ ಕಾವ್ಯ ಮಾರನ್ ಬರೋಬ್ಬರಿ 23 ಕೋಟಿ ರೂಪಾಯಿಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಟ್ರಾವಿಸ್ ಹೆಡ್, ಕ್ಯಾಪ್ಟನ್ ಕಮಿನ್ಸ್, ಅಭಿಷೇಕ್ ಶರ್ಮಾ ಇವರನ್ನೆಲ್ಲ ಬಿಟ್ಟು ಹೆನ್ರಿಚ್ಗೆ ಭಾರೀ ಹಣ ಕೊಡುತ್ತಿರುವುದು ಫ್ಯಾನ್ಸ್ಗೆ ಆಶ್ಚರ್ಯ ಮೂಡಿಸಿದೆ.
ಇದನ್ನು ನೋಡಿ:ಟಾಲಿವುಡ್ನ ಮತ್ತೊಬ್ಬ ಸ್ಟಾರ್ ನಟನ ಜೊತೆ ಜಾನ್ಹವಿ ಕಪೂರ್!
ಒಂದು ವೇಳೆ ಇಷ್ಟೊಂದು ಹಣವನ್ನು ಕೊಟ್ಟು ಹೆನ್ರಿಚ್ ಕ್ಲಾಸೆನ್ರನ್ನ ಕಾವ್ಯ ಮಾರನ್ ಉಳಿಸಿಕೊಂಡಿದ್ದೇ ಆದರೆ ಇಡೀ ಐಪಿಎಲ್ ಇತಿಹಾಸದಲ್ಲಿ ಹೊಸ ರೆಕಾರ್ಡ್ ಆಗಲಿದೆ. ಅಲ್ಲದೇ ವಿರಾಟ್ ಕೊಹ್ಲಿಗೆ ನೀಡುವ 18 ಕೋಟಿ ರೂ.ಗಳಿಗಿಂತ 5 ಕೋಟಿ ರೂಪಾಯಿ ಅಧಿಕ ಅಂದರೆ ಒಟ್ಟು ₹23 ಕೋಟಿ ಹೆನ್ರಿಚ್ ಕ್ಲಾಸೆನ್ ಪಡೆದಂತೆ ಆಗಲಿದೆ. ಇದರಿಂದ ಕೊಹ್ಲಿ ರೆಕಾರ್ಡ್ ಉಡೀಸ್ ಆಗಲಿದೆ.