ಅವರು ಚಿತ್ರ ಸಾಹಿತಿ. ಪತ್ರಕರ್ತ. ಅನಂತನಾಗ್, ಶ್ರೀನಾಥ್, ಅಂಬರೀಷ್, ಶಿವರಾಜ್ ಕುಮಾರ್, ವಿಷ್ಣುವರ್ಧನ್.. ಹೀಗೆ ಹಲವಾರು ಸ್ಟಾರ್ ನಟರಿಗೆ ಅದ್ಭುತ ಗೀತೆಗಳನ್ನು ಸೃಷ್ಟಿಸಿದ್ದ ಚಿತ್ರ ಸಾಹಿತಿ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿದ್ದ ಶ್ಯಾಮ್ ಸುಂದರ ಕುಲಕರ್ಣಿ ಅಕ್ಟೋಬರ್ 31ರಂದು ನಿಧನರಾಗಿದ್ದಾರೆ. ಮೃತಪಟ್ಟ ಸುಮಾರು 15 ದಿನಗಳ ನಂತರ ವಿಷಯ ಮಾಧ್ಯಮಗಳಿಗೆ ಗೊತ್ತಾಗಿದೆ. ತಮ್ಮ ಸಾವನ್ನು ಸುದ್ದಿ ಮಾಡಬೇಡಿ ಎಂದು ಕುಟುಂಬದವರಲ್ಲಿ ಕೇಳಿಕೊಂಡಿದ್ದರಂತೆ. ಹೀಗಾಗಿ ಅವರ ಸಾವಿನ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಿರಲಿಲ್ಲ.
ಶ್ಯಾಂ ಸುಂದರ ಕುಲಕರ್ಣಿ ಪೆನ್ನಿನಲ್ಲಿ ಅರಳಿದ್ದ ಗೀತೆಗಳ ಒಂದು ಪುಟ್ಟ ಮಾಹಿತಿ ಇಲ್ಲಿದೆ.
ಮೂಡಣದಾ ರವಿ.. ಮೂಡಲಿ ಮಮತೆಯಲಿ.. (ಛಲಗಾರ)
ಇದು ಶ್ಯಾಂ ಸುಂದರ ಕುಲಕರ್ಣಿ ಬರೆದಿದ್ದ ಮೊದಲ ಹಾಡು.
ಅಂಬರೀಷ್ ಅವರಿಗಾಗಿ..
ಒಲವಿನ ಉಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು.. (ಒಲವಿನ ಉಡುಗೊರೆ)
ನಿನ್ನಂತ ಚೆಲುವೆಯನು ಬೇರೆಲ್ಲೂ ಕಾಣೆನು ನಾ (ಒಲವಿನ ಉಡುಗೊರೆ)
ಅನಂತ್ ನಾಗ್ ಅವರಿಗೆ..
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. (ಒಂದು ಸಿನಿಮಾ ಕಥೆ)
ನಿಮ್ಮ ಮಗುವು ನಗುತಿರುವ.. (ಗೌರಿ ಗಣೇಶ)
ನನ್ನ ಮರೆಯದಿರು.. ನನ್ನ ತೊರೆಯದಿರು.. (ಸುಖ ಸಂಸಾರಕ್ಕೆ 12 ಸೂತ್ರಗಳು)
ಶಿವರಾಜ್ ಕುಮಾರ್ ಅವರಿಗಾಗಿ ಬರೆದ
ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ.. (ಶಿವ ಸೈನ್ಯ)
ವಿಷ್ಣುವರ್ಧನ್ ಅವರಿಗಾಗಿ
ಚೆಲುವಿನಲಿ ಸಾಟಿ ಇಲ್ಲ.. ಯಾವ ರತಿಯೂ.. (ಒಂದಾಗಿ ಬಾಳು)
ಮುರಳಿ ಅವರಿಗೆ ಬರೆದ (ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರ)
ಅನುರಾಗದ ಆರಾಧನೆ.. (ಪ್ರೇಮ ಪರ್ವ)
ಸುತ್ತಮುತ್ತಲು ಸಂಜೆಗತ್ತಲು.. ಮೈಯ್ಯ ಮುತ್ತಲು.. (ಪರಾಜಿತ)
ಹೀರೋ ಹೀರೋ ಹೀರೋ ನಾನೇ ನಾನೇ ನಾನೇ.. (ಅಜೇಯ)
ವಿಷ್ಣುವರ್ಧನ್ ಅವರಿಗಾಗಿ
ಸೇವಂತಿಯೇ ಸೇವಂತಿಯೇ.. (ಸೂರ್ಯವಂಶ)
ಪ್ರೀತಿಯ ಮಾತನು.. (ಹೃದಯಗೀತೆ)
ಶ್ರೀನಾಥ್ ಅವರಿಗಾಗಿ
ಯಾವ ಹೂವು ಯಾರ ಮುಡಿಗೋ.. (ಬೆಸುಗೆ)
ಪ್ರೀತಿಸಿದೆ.. ಪ್ರೇಮಿಸಿದೆ.. (ಶಿಕಾರಿ)
ಹೀಗೆ ಅಪರೂಪದಲ್ಲಿ ಅಪರೂಪ ಎನ್ನುವಂತಹ ಹಾಡುಗಳನ್ನೇ ಬರೆದಿದ್ದಾರೆ.
ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಶ್ಯಾಮ ಸುಂದರ ಕುಲಕರ್ಣಿ ಅವರು, ನಟಿ ಕಲ್ಪನಾ ಅವರಿಂದ ಅಂಕಣಗಳನ್ನು ಬರೆಸಿದ್ದರು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನೇರವಾಗಿ, ಪರೋಕ್ಷವಾಗಿ ಅವರು ಸಹಾಯ ಮಾಡಿದ್ದರು. ಡಾ ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರ ಜೊತೆ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದರು.