ನ್ಯಾಷನಲ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾದ ಕೆಲಸ ನಡುವೆ ನಟ ಶಿವಣ್ಣರನ್ನು ಭೇಟಿಯಾಗಿದ್ದಾರೆ. ಹಲವು ಸಮಯದ ನಂತರ ಯಶ್ ಮತ್ತು ಶಿವಣ್ಣ ಭೇಟಿಯಾಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ̤
ಶಿವಣ್ಣ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಿನಿಮಾದ ಸೆಟ್ಗೆ ತೆರಳಿ ಶಿವಣ್ಣರನ್ನು ಯಶ್ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಚಿತ್ರತಂಡಕ್ಕೆ ಯಶ್ ವಿಶ್ ಮಾಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಶಿವಣ್ಣನ 131ನೇ ಸಿನಿಮಾಗೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್ ಎನ್ ರೆಡ್ಡಿ ಕ್ಲ್ಯಾಪ್ ಮಾಡಿದರು. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡರು.