ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಗೆರಿಲ್ಲಾ 450 ಹೆಸರಿನ ಹೊಸ ಬೈಕನ್ನು ಪರಿಚಯಿಸಿದೆ. ನೂತನ ಬೈಕನ್ನು 2.39 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದೆ. ಗೆರಿಲ್ಲಾ 450 ಬೈಕ್ ಹಿಮಾಲಯನ್ ಮತ್ತು ಹಂಟರ್ ಬೈಕ್ನ ಪರಿಪೂರ್ಣ ಮಿಶ್ರಣವಾಗಿದೆ. 500ಸಿಸಿ ವಿಭಾಗದಲ್ಲಿ ಇದನ್ನು ಪರಿಚಯಿಸಿದೆ.
ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ರಾಯಲ್ ಎನ್ಫೀಲ್ಡ್ ಗೆರಿಲ್ಲಾ 450 ಬೈಕನ್ನು ಮೂರು ರೂಪಾಂತರದಲ್ಲಿ ಪರಿಚಯಿಸಿದೆ. ಫ್ಲ್ಯಾಶ್, ಡ್ಯಾಶ್ ಮತ್ತು ಅನಲಾಗ್ ರೂಪಾಂತರದಲ್ಲಿ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಬ್ರೇವಾ ಬ್ಲೂ ಮತ್ತು ಹಂಟರ್ ಬಣ್ಣದಲ್ಲಿ ಸಿಗುತ್ತಿದೆ. ಕಂಪನಿಯ ಅಧಿಕೃತ ಡೀಲರ್ ಶಿಪ್ ಮೂಲಕ ಖರೀದಿಸಬಹುದಾಗಿದೆ. ಗೆರಿಲ್ಲಾ 450 ಬೈಕ್ ಹಿಮಾಲಯನ್ ಬೈಕ್ನ ರೌಂಡ್ ಹೆಡ್ಲ್ಯಾಂಪನ್ನು ಹೊಂದಿದೆ. ಸ್ಪ್ಲಿಟ್ ಇಂಡಿಕೇಟರ್ ಅನ್ನು ಅಳವಡಿಸಿಕೊಂಡಿದೆ. ನೂತನ ಬೈಕ್ನಲ್ಲಿ 11 ಲೀಟರ್ನ ಪೆಟ್ರೋಲ್ ಟ್ಯಾಂಕ್ ನೀಡಲಾಗಿದ್ದು, ವಿಭಿನ್ನ ಶೈಲಿಯಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ನೂತನ ಬೈಕ್ 780 ಎಂಎಂ ಸೀಟರ್ನೊಂದಿಗೆ ಬಂದಿದೆ, ಗ್ರಾಬ್ ಹ್ಯಾಂಡಲ್ ಇದರಲ್ಲಿದೆ. ಗೆರಿಲ್ಲಾ 450 ಬೈಕ್ 452ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 8000 ಆರ್ಪಿಎಂ ಮತ್ತು 39.47 ಬಿಹೆಚ್ಪಿ ಗರಿಷ್ಠ ಶಕ್ತಿಯನ್ನು ಹೊಂದಿದೆ. 5,500 ಆರ್ಪಿಯಂನಲ್ಲಿ 40 ಎನ್ಎಮ್ನ ಟಾರ್ಕ್ ಉತ್ಪಾದಿಸುತ್ತದೆ. ಇದಲ್ಲದೆ, ಸಿಕ್ಸ್ ಸ್ಟೀಡ್ ಗೇರ್ ಬಾಕ್ಸ್, ಮುಂಭಾಗ 43ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ 140 ಎಂಎಂ ಮತ್ತು ಲಿಂಕೇಜ್ ಟೈಪ್ ಮೊನೊ ಶಾಕ್ನೊಂದಿಗೆ ಮಾರುಕಟ್ಟೆಗೆ ಬಂದಿದೆ.