ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರಂತೆ ಪಿಎಂ ಮೋದಿ ಸಹ ಆಸ್ತಿಯ ವಿವರದ ಅಫಿಡವಿಟ್ ಮಾಹಿತಿಯನ್ನು ಕೊಡಲೆಬೇಕು. ಹಾಗಾದರೆ ಮೋದಿ ಆಸ್ತಿ ಎಷ್ಟು ಗೊತ್ತಾ..?
ಪ್ರಧಾನಿ ಮೋದಿ ಆಸ್ತಿ ಎಷ್ಟು ಗೊತ್ತಾ..?
• 3.02 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ
• 52,920 ರೂಪಾಯಿ ನಗದು.
• 3 ಬಾರಿ ಸಿಎಂ, 2 ಸಲ ಪ್ರಧಾನಿ ಆಗಿದ್ದರೂ ನರೇಂದ್ರ ಮೋದಿ ಅವರ ಬಳಿ ಯಾವುದೇ ಜಮೀನು, ಮನೆ ಅಥವಾ ಕಾರು ಇಲ್ಲ.
*ಮೋದಿ ಎಷ್ಟು ಟ್ಯಾಕ್ಸ್ ಕಟ್ತಾರೆ..?
• 2018-19 ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರೂಪಾಯಿ
• 2022-23 ರಲ್ಲಿ 23.5 ಲಕ್ಷ ರೂಪಾಯಿ
ಅಂದರೆ ದುಪ್ಪಟ್ಟು ಟ್ಯಾಕ್ಸ್ ಕಟ್ಟಿದ್ದಾರೆ. ಇದು ಅವರ ಆಸ್ತಿ ಬೆಳವಣಿಗೆಯನ್ನು ತೋರಿಸುತ್ತದೆ.
ಮೋದಿ ಬ್ಯಾಂಕ್ ಖಾತೆಯಲ್ಲಿನ ಹಣ…!
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಅಕೌಂಟ್ ಹೊಂದಿದ್ದಾರೆ
• ಗಾಂಧಿನಗರ ಶಾಖೆಯಲ್ಲಿ 73,304 ರೂಪಾಯಿ
• ವಾರಣಾಸಿ ಶಾಖೆಯಲ್ಲಿ ಕೇವಲ 7,000 ರೂಪಾಯಿ
ಹೂಡಿಕೆ-ಚಿನ್ನಾಭರಣ ಎಷ್ಟಿದೆ.?
• ಎಸ್ಬಿಐ ನಲ್ಲಿ 2,85,60,338 ರೂ ಮೌಲ್ಯದ ಸ್ಥಿರ ಠೇವಣಿ
• 2,67,750 ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳು
ಪ್ರಧಾನಿ ಮೋದಿ ಇಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಆಸ್ತಿಯ ಮಾಹಿತಿಯ ಪ್ರಕಾರ ಅವರ ಆಸ್ತಿಯ ಒಟ್ಟು ವಿವರ ಇದಾಗಿದೆ.