ರಾಜ್ಯದಲ್ಲಿ ರಣಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ, ಚಿಲ್ಡ್ ಬಿಯರ್ ಗಳ ಮಾರಾಟವು ಜೋರಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಜನರು ತಣ್ಣನೆಯ ಬಿಯರ್ ಖರೀದಿಗೆ ಮುಂದಾಗಿದ್ದಾರಂತೆ. ಆರೋಗ್ಯದ ಮೇಲೆ ಕಾಳಜಿ ಇರೋರು ಫ್ರೂಟ್ ಜ್ಯೂಸ್ ಮೊರೆ ಹೋಗ್ತಿದ್ರೆ, ಇತ್ತ ಆಲ್ಕೊಹಾಲ್ ಪ್ರಿಯರು ತಮ್ಮ ನೆಚ್ಚಿನ ಬಿಯರ್ ಕಡೆ ಒಲವನ್ನ ತೋರಿದ್ದಾರೆ.
ಹೌದು.. ಏ.1 ರಿಂದ 11 ವರೆಗೆ ರಾಜ್ಯದಲ್ಲಿ ಬರೋಬರೀ 17.67 ಲಕ್ಷ ಲೀಟರ್ ವಿವಿಧ ಬ್ರಾಂಡ್ ಗಳ ಬಿಯರ್ ಭರ್ಜರಿಯಾಗಿ ಸೇಲ್ ಆಗಿದೆ. ಕಳೆದ 3 ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲೆಯ ಮದ್ಯ ಮಾರಾಟವಾಗಿದೆ. 2021ರ ಬೇಸಿಗೆ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಸೇಲ್ ಆಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಹಾಗೂ 2023ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು.
2023ಕ್ಕೆ ಹೋಲಿಸಿದರೆ ಈ ವರ್ಷ 4.51 ಲಕ್ಷ ಲೀಟರ್ ಅಧಿಕವಾಗಿ ಸೇಲ್ ಆಗಿದೆ. ಇನ್ನು ಬಿಯರ್ ಜೊತೆ ಇತರೆ ಮದ್ಯ ಮಾರಾಟವು ಏಪ್ರಿಲ್ ಆರಂಭದಿಂದ ಏರಿಕೆಯಾಗಿದ್ದು,
ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ 65 ಸಾವಿರ ಬಾಕ್ಸ್ ಭಾರತೀಯ ಮದ್ಯಗಳು ಹೆಚ್ಚಾಗಿ ಖರೀದಿ ಆಗಿವೆ. ಚುನಾವಣಾ ಕಾವು ಹೆಚ್ಚಾದಂತೆ ಮದ್ಯ ಮಾರಾಟದಲ್ಲೂ ಏರಿಕೆ ಆಗುವ ಸಾಧ್ಯತೆ ಇದೆ ಅಂತ ಮದ್ಯ ಮಾರಾಟಗಾರರು ಹೇಳುತ್ತಿದ್ದಾರೆ.